ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ಹಾಗೂ ಆಂಕೋ ಸರ್ಜರಿ ವಿಭಾಗದ ಡಾ.ಸಂತೋಷ್ ಕುಮಾರ್ ಕೆ.ವೈ, ಡಾ.ಪ್ರವೀಣ್ ಕುಮಾರ್ ಆರ್.ಭಟ್ ಶಸ್ತ್ರಚಿಕಿತ್ಸಾ ತಂಡದಲ್ಲಿದ್ದರು. 9 ಗಂಟೆ ನಡೆದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಅತ್ಯಂತ ಕಡಿಮೆ ರಕ್ತಸ್ರಾವಕ್ಕೂ ಕಾರಣವಾಯಿತು. ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗಳಲ್ಲಿ ಅರಿವಳಿಕೆ ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗ ಮುಖ್ಯಸ್ಥ ಡಾ.ಅವಿನಾಶ್ ಭಂಡಾರಿ, ಡಾ.ಗೋವಿಂದರಾಜ್ ಭಟ್, ಡಾ.ಜಾಯ್ಲೀನ್ ಡಿಸೋಜ, ಡಾ.ರಂಜನ್ ನಾಯಕ್ ಅವರ ತಂಡ ಪರಿಣತಿಯಿಂದ ಈ ಕಾರ್ಯ ನಿರ್ವಹಿಸಿದರು. ಉತ್ತಮ ಶುಶ್ರೂಷಾ ಸೇವೆಯಿಂದಾಗಿ ರೋಗಿ ಶೀಘ್ರವಾಗಿ ಚೇತರಿಸಿಕೊಂಡು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಶಸ್ತ್ರಚಿಕಿತ್ಸೆಯಾಗಿ ಒಂದು ತಿಂಗಳು ಕಳೆದಿದ್ದು ರೋಗಿಯ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅವರು ಶಸ್ತ್ರಚಿಕಿತ್ಸೆಯ ನಂತರದ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.