ಸೇವಾ ಮನೋಭಾವದಿಂದ ಯಶಸ್ಸು

 ಜ್ಯೋತಿನಗರ ಸರ್ಕಾರಿ ಶಾಲೆಗೆ ಗ್ಯಾರೇಜು ಮಾಲೀಕರ ಸಂಘದಿಂದ ಧ್ವನಿವರ್ಧಕ ಹಸ್ತಾಂತರಿಸಿದ ಸಂದರ್ಭ ಗುರುಪ್ರಸಾದ್, ಶಂಕರ್ ಕೋಟ್ಯಾನ್, ಅಪೋಲಿಯನ್ ಮೊನಿಸ್ ಮತ್ತಿತರರಿದ್ದರು.
ಜ್ಯೋತಿನಗರ ಸರ್ಕಾರಿ ಶಾಲೆಗೆ ಗ್ಯಾರೇಜು ಮಾಲೀಕರ ಸಂಘದಿಂದ ಧ್ವನಿವರ್ಧಕ ಹಸ್ತಾಂತರಿಸಿದ ಸಂದರ್ಭ ಗುರುಪ್ರಸಾದ್, ಶಂಕರ್ ಕೋಟ್ಯಾನ್, ಅಪೋಲಿಯನ್ ಮೊನಿಸ್ ಮತ್ತಿತರರಿದ್ದರು.
Published on
ಮೂಡುಬಿದಿರೆ: ಸಂಘಟನೆ ಪ್ರತಿವರ್ಷ ಒಂದೊಂದು ಶಾಲೆಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದು, ಪದಾಧಿಕಾರಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಸ್ಪಷ್ಟ ಗುರಿ, ದೃಢಸಂಕಲ್ಪ, ಸೇವಾ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಿ ಕುಟುಂಬ, ಶಾಲೆ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ಸಂಘ ಅಧ್ಯಕ್ಷ ಗುರುಪ್ರಸಾದ್ ಹೇಳಿದರು.
ಜ್ಯೋತಿನಗರ ಸರ್ಕಾರಿ ಶಾಲೆಗೆ ಮೂಡುಬಿದಿರೆ ವಲಯದ ಗ್ಯಾರೇಜು ಮಾಲೀಕರ ಸಂಘದಿಂದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು.
ಸಂಘ ಅಧ್ಯಕ್ಷ ಗುರುಪ್ರಸಾದ್ ಧ್ವನಿವರ್ಧಕ ಹಸ್ತಾಂತರಿಸಿದರು. ಗ್ಯಾರೇಜು ಮಾಲೀಕರ ಸಂಘ ಕೋಶಾಧಿಕಾರಿ ಶಂಕರ್ ಕೋಟ್ಯಾನ್ ಮಾತನಾಡಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮೀನ್, ಸದಸ್ಯರಾದ ಸುಧೀರ್ ಭಟ್, ಅಲ್ತ್ಾ, ಕುಮಾರ್, ಯಶವಂತ, ಸಂತೋಷ್, ಲೋಕೇಶ್, ವಾಸುದೇವ ಶೆಟ್ಟಿಗಾರ್, ಗಿರೀಶ್, ದಿನೇಶ್, ಮುಖ್ಯ ಶಿಕ್ಷಕಿ ಅಪೋಲಿಯನ್ ಮೊನಿಸ್, ಶಿಕ್ಷಕಿಯರಾದ ಸುನೀತಾ, ಗ್ರೇಸಿ ಡಿಸೋಜ, ಸೌಮ್ಯಾ, ಅಶ್ವಿನಿ, ಎಮಿಲಿನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net