ಕುಂದಾಪುರ: ಯಶಸ್ಸು ಎನ್ನುವುದು ಶಿಸ್ತು, ಶ್ರದ್ಧೆ ಮತ್ತು ಸತತ ಪ್ರಯತ್ನದಿಂದ ಬರುತ್ತದೆ. ಶಿಕ್ಷಣದ ಜತೆಗೆ ಮೌಲ್ಯಯುತ ಶಿಕ್ಷಣ ಪಡೆಯುವುದು ಮುಖ್ಯವಾಗುತ್ತದೆ. ಜೀವನದ ಸೋಲುಗಳು ಹೊಸ ಪಾಠವನ್ನು ಕೊಡುತ್ತವೆ. ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತವೆ. ಪ್ರತಿ ಒಳ್ಳೆಯ ಹೆಜ್ಜೆಗಳು ಎಲ್ಲವನ್ನೂ ಕೊಡುತ್ತವೆ ಎಂದು ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ ಅಭಿಪ್ರಾಯಪಟ್ಟರು.