ದೂರದೃಷ್ಟಿಯಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು

ಬೆಳ್ತಂಗಡಿಯ ಎಂಐಟಿ ಮಾಹೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಡಾ.ಸುಧಾಕರ್ ವೈ. ಉದ್ಘಾಟಿಸಿದರು. ಉಪ ಪ್ರಾಂಶುಪಾಲೆ ನಂದಕುಮಾರಿ, ಜ್ಯೋತ್ಸ್ನಾ ಎಸ್., ಪ್ರಶಾಂತ್ ಎಸ್.ಪೂಜಾರಿ ಇತರರು ಇದ್ದರು.
ಬೆಳ್ತಂಗಡಿಯ ಎಂಐಟಿ ಮಾಹೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಡಾ.ಸುಧಾಕರ್ ವೈ. ಉದ್ಘಾಟಿಸಿದರು. ಉಪ ಪ್ರಾಂಶುಪಾಲೆ ನಂದಕುಮಾರಿ, ಜ್ಯೋತ್ಸ್ನಾ ಎಸ್., ಪ್ರಶಾಂತ್ ಎಸ್.ಪೂಜಾರಿ ಇತರರು ಇದ್ದರು.
Published on
ಬೆಳ್ತಂಗಡಿ: ವಿದ್ಯಾರ್ಥಿ ಜೀವನದ ಯಶಸ್ಸಿಗೆ ದೂರದೃಷ್ಟಿ ಮತ್ತು ಸಕಾರಾತ್ಮಕ ಮನೋಭಾವ ಅತ್ಯಂತ ಮುಖ್ಯ. ಪಠ್ಯವನ್ನು ಪರೀಕ್ಷೆಗಳಿಗೆ ಸೀಮಿತವಾಗಿಸದೆ ಅದರ ಅರ್ಥ ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಬೆಳ್ತಂಗಡಿಯ ಎಂಐಟಿ ಮಾಹೆ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯೂವ್ಯಾನಿಟೀಸ್ ಸಹ ಪ್ರಾಧ್ಯಾಪಕ ಡಾ.ಸುಧಾಕರ್ ವೈ.ಎನ್. ಹೇಳಿದರು.
ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸ್ಫಟಿಕ’ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.

ಉಪ ಪ್ರಾಂಶುಪಾಲೆ ನಂದಕುವಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಸಂವು ವಿದ್ಯಾರ್ಥಿಗಳಿಗೆ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವ ಜತೆಗೆ ವಿನೂತನ ಆವಿಷ್ಕಾರ ಮತ್ತು ವಿದ್ಯಾರ್ಥಿ ಸಮಗ್ರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಸಂಗಳಿಂದ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ವೃದ್ಧಿಸಿ,ಆತ್ಮವಿಶ್ವಾಸ ಬೆಳೆಸುತ್ತದೆ ಎಂದರು.
ಸ್ಫಟಿಕ ಸಂ ಅಧ್ಯಕ್ಷ ಪ್ರಶಾಂತ್ ಎಸ್.ಪೂಜಾರಿ, ಕಾರ್ಯದರ್ಶಿ ಜ್ಯೋತ್ಸ್ನಾ ಎಸ್.ನಡೋಳಿ ಸೇರಿದಂತೆ ಇತರೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಕಾಲೇಜು ಹಾಗೂ ರಾಸಾಯನಶಾಸ್ತ್ರ ವಿಭಾಗದ ವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಶ್ರದ್ಧಾ ಸ್ವಾಗತಿಸಿ ವಂದಿಸಿದರು. ವರಲಕ್ಷ್ಮೀ, ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಡಾ.ಗಾನವಿ ಡಿ. ಸಂಯೋಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net