

ಕಾಸರಗೋಡು:ದೃಢಮನಸ್ಸು ಮತ್ತು ಉದ್ದೇಶದೊಂದಿಗೆನಡೆಸುವ ಕೆಲಸಗಳಿಂದ ಜೀವನದಲ್ಲಿಯಶಸ್ಸು ಸಾಧಿಸಲು ಸಾಧ್ಯ ಎಂದುಒಡಿಯೂರು ಶ್ರೀ ಗುರುದೇವಾನಂದಸ್ವಾಮೀಜಿ ಹೇಳಿದರು.
ಪೆರ್ಲಸಮೀಪದ ನೆಲ್ಲಿಕುಂಜೆ ಶ್ರೀವಿಷ್ಣುಮೂರ್ತಿ ದೇವಸ್ಥಾನದನವೀಕರಣ ಪುನಃ ಪ್ರತಿಷ್ಠಾಪನಾಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನನೀಡಿದರು.
ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಆಶೀರ್ವಚನ ನೀಡಿ,ದೇವಸ್ಥಾನಕಟ್ಟುವುದು ಮಹತ್ಕಾರ್ಯವಲ್ಲ.ದೇವಸ್ಥಾನದಪಾವಿತ್ರೃ ಉಳಿಸುವುದರ ಜತೆಗೆಅಭಿವೃದ್ಧಿ ಸಾಧಿಸುವುದು ಮುಖ್ಯಎಂದರು.
ಬ್ರಹ್ಮಕಲಶೋತ್ಸವಸಮಿತಿ ಅಧ್ಯಕ್ಷ ರಮಾನಾಥ ರೈಮೇಗಿನಕಡಾರು ಅಧ್ಯಕ್ಷತೆವಹಿಸಿದ್ದರು.ಪ್ರವಚನಕಾರನಟರಾಜ ಪರ್ಕಳ,ಬದಿಯಡ್ಕಗ್ರಾಪಂ ಅಧ್ಯಕ್ಷ ಶಂಕರ ಡಿ.,ಸದಸ್ಯಮಧುಸೂದನ ಕಂಗಿಲ,ನೀರ್ಚಾಲುಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲುಅಧ್ಯಕ್ಷ ಜಯದೇವ ಖಂಡಿಗೆ,ಡಾ.ಶ್ರೀಪತಿಕಜಂಪಾಡಿ,ಇಡಿಯಡ್ಕಕ್ಷೇತ್ರದ ಕಾರ್ಯದರ್ಶಿ ಸದಾನಂದಶೆಟ್ಟಿ ಕುದ್ವ,ರಾಜ್ಯಕಿರು ಕೈಗಾರಿಕಾ ಸಂಘಟನೆ ಕಾಸರಗೋಡುಜಿಲ್ಲಾಧ್ಯಕ್ಷ ರಾಜಾರಾಮ ಪೆರ್ಲ,ಡಾ.ಜಯದೇವಕಂಗಿಲ,ಡಾ.ಜಯಗೋವಿಂದಉಕ್ಕಿನಡ್ಕ,ಚೇರ್ಕಬೆಕ್ಷೇತ್ರದ ಮೊಕ್ತೇಸರ ಕಾರ್ಯದರ್ಶಿಕೃಷ್ಣ ಭಟ್ ಕೋಟೆ,ಬ್ರಹ್ಮಕಲಶೋತ್ಸವಸಮಿತಿ ಕಾರ್ಯಾಧ್ಯಕ್ಷ ಬಾಲಸುಬ್ರಹ್ಮಣ್ಯಸರ್ಪಮಲೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವಸಮಿತಿ ಕಾರ್ಯದರ್ಶಿ ಮಹೇಶ ಗುತ್ತುಸ್ವಾಗತಿಸಿದರು.ಕೋಶಾಧಿಕಾರಿಗೋಪಾಲಕೃಷ್ಣ ಶರ್ಮ ಸರವು ವಂದಿಸಿದರು.ಸುರೇಶನೆಲ್ಲಿಕುಂಜೆ ನಿರೂಪಿಸಿದರು.