ಸಾಧಿಸುವ ಛಲ, ಇಚ್ಛಾಶಕ್ತಿಯಿಂದ ಜೀವನದಲ್ಲಿ ಯಶಸ್ಸು

ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜ್‌ನ ಓರಿಯೆಂಟೇಶನ್ ಕಾರ್ಯಕ್ರಮ ಬಿ.ಸಿ.ರೋಡ್‌ನಲ್ಲಿ ನಡೆಯಿತು. ಆಪ್ತ ಸಮಾಲೋಚಕ ಡಾ.ಗುರುರಾಜ್ ಇಟಗಿ, ಎಂಐಟಿಇ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕುಮಾರ್ ಮೊದಲಾದವರಿದ್ದರು.
ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜ್‌ನ ಓರಿಯೆಂಟೇಶನ್ ಕಾರ್ಯಕ್ರಮ ಬಿ.ಸಿ.ರೋಡ್‌ನಲ್ಲಿ ನಡೆಯಿತು. ಆಪ್ತ ಸಮಾಲೋಚಕ ಡಾ.ಗುರುರಾಜ್ ಇಟಗಿ, ಎಂಐಟಿಇ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕುಮಾರ್ ಮೊದಲಾದವರಿದ್ದರು.
Published on
ಬಂಟ್ವಾಳ: ಸಾಧಿಸುವ ಛಲ, ಇಚ್ಛಾಶಕ್ತಿ ಬೆಳೆಸುವ ಗುಣ ಮಕ್ಕಳಲ್ಲಿ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದರ ಮೂಲಕವೇ ಅಸಾಧಾರಣ ಹೆಜ್ಜೆಯೊಂದಿಗೆ ಮುನ್ನಡೆಯಬಹುದು. ಸಾಮಾನ್ಯ ವ್ಯಕ್ತಿ ಕೂಡ ದೇಶದಲ್ಲಿ ಮಹತ್ತರ ಸಾಧನೆ ಬರೆದ ಹಲವು ಉದಾಹರಣೆಗಳು ನಮ್ಮ ಮುಂದಿದ್ದು ಅವು ನಮಗೆ ಮಾದರಿಯಾಗಬೇಕು ಎಂದು ಸಂಶೋಧಕ ಹಾಗೂ ಆಪ್ತ ಸಮಾಲೋಚಕ ಡಾ.ಗುರುರಾಜ್ ಇಟಗಿ ಹೇಳಿದರು.
ಗುರುವಾರ ಬಿ.ಸಿ.ರೋಡ್ ಲಯನ್ಸ್ ಕ್ಲಬ್‌ನಲ್ಲಿ, ಬಿ.ಸಿ.ರೋಡ್ ಹಾಗೂ ಪಂಪ್‌ವೆಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂಐಟಿಇ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕುಮಾರ್ ಮಾತನಾಡಿ, ಕಳೆದ 25 ವರ್ಷಗಳಿಂದ ಎಂಐಟಿಇ ಪಂಪ್‌ವೆಲ್ ಹಾಗೂ ಬಿ.ಸಿ.ರೋಡ್‌ನಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ನೀಡುತ್ತ ಬಂದಿದೆ. ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.
ಸಂಸ್ಥೆಯ ನಿರ್ದೇಶಕಿ ನಿಶ್ಮಿತಾ ರಾಕೇಶ್ ಕುಮಾರ್, ಉಪನ್ಯಾಸಕ ಅಶ್ರಫ್, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿಶಾ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಭವ್ಯಶ್ರೀ ಸ್ವಾಗತಿಸಿದರು. ರಕ್ಷಿತಾ ಅತಿಥಿ ಪರಿಚಯಿಸಿದರು. ಶಾಂತೇರಿ ವಂದಿಸಿದರು. ಗೀತಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net