ಪೌಲ್ ಹ್ಯಾರಿಸ್ ಫೆಲೋಶಿಪ್‌ಗೆ ದೇಣಿಗೆ ನೀಡಿ ಪದವಿ ಪಡೆದ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಹಾಗೂ ಪೂರ್ವ ಕಾರ್ಯದರ್ಶಿ ಚಿದಾನಂದ ಕುಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್‌ಗೆ ವೆಂಕಟೇಶ್ ಎಸ್.ಸಿ. ಅವರನ್ನು ಸ್ವಾಗತಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಭವಾನಿ ಶಂಕರ್, ನಿಕಟಪೂರ್ವ ಎಜಿ ಪ್ರೊ.ಬಾಲಕೃಷ್ಣ ಪೈ ಅವರನ್ನು ಗೌರವಿಸಲಾಯಿತು. ಅಸಿಸ್ಟೆಂಟ್ ಗವರ್ನರ್ ರಜಾಕ್ ಕಬಕ್ಕಾಕರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸ್ವಚ್ಛ ಸುಬ್ರಹ್ಮಣ್ಯ ಬ್ಯಾನರ್ ಬಿಡುಗಡೆ ಮಾಡಲಾಯಿತು.