ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿ ಕಡಿತ ಭೀತಿ

 ಭಾರೀ ಮಳೆಗೆ ಕುಮಾರಧಾರ ನದಿ ಮೈದುಂಬಿ ಹರಿದು ತಿರುಗಣೆಗುಂಡಿ ಬಳಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಬದಿಯ ಮಣ್ಣು ನೀರು ಪಾಲಾಗಿರುವುದು.
ಭಾರೀ ಮಳೆಗೆ ಕುಮಾರಧಾರ ನದಿ ಮೈದುಂಬಿ ಹರಿದು ತಿರುಗಣೆಗುಂಡಿ ಬಳಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಬದಿಯ ಮಣ್ಣು ನೀರು ಪಾಲಾಗಿರುವುದು.
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನದಿಯ ಪ್ರವಾಹ ಮತ್ತು ನಿರಂತರ ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿ ಬಯ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಮಣ್ಣಿನ ಸವೆತ ಉಂಟಾಗಿದೆ.

ಕುಮಾರಧಾರಾ ನದಿಯ ಉಪನದಿ ದರ್ಪಣತೀರ್ಥಕ್ಕೆ ನೂತನ ಸೇತುವೆ ನಿರ್ಮಾಣವಾಗಿದೆ. ಈ ಹಿಂದೆ ಸೇತುವೆಯಿಂದ ಮುಂದಕ್ಕೆ ನದಿ ನೀರು ಆವರಿಸಿ ಸಂಚಾರ ವ್ಯತ್ಯಯವಾಗುತ್ತಿದ್ದ ಕಾರಣ ರಸ್ತೆಯನ್ನು ಮಣ್ಣುಹಾಕಿ ಎತ್ತರಿಸಲಾಗಿದೆ. ಆದರೆ ಈಗ ನದಿ ನೀರಿ ರಭಸಕ್ಕೆ ತಿರುಗಣೆಗುಂಡಿ ಎಂಬಲ್ಲಿ ಮಣ್ಣು ನೀರು ಪಾಲಾಗುತ್ತಿದೆ. ರಸ್ತೆಯ ಬದಿ ಮಣ್ಣಿನ ಸವೆತ ಉಂಟಾಗಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net