ಯಕ್ಷಗಾನ ಕಲಿತ ವಿದ್ಯಾರ್ಥಿ ಪರೀಕ್ಷೆಯಲ್ಲಿ ಸೋಲಲ್ಲ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಸಂದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ಯಾಮರಾವ್ ಪಾಲಮೆ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ರಿತೇಶ್ ಕುವಾರ್ ಶೆಟ್ಟಿ, ರಮೇಶ್ ಉಚ್ಚಿಲ, ಸತೀಶ್ ಭಟ್ ಉಚ್ಚಿಲ ಇದ್ದರು.
ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಸಂದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ಯಾಮರಾವ್ ಪಾಲಮೆ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ರಿತೇಶ್ ಕುವಾರ್ ಶೆಟ್ಟಿ, ರಮೇಶ್ ಉಚ್ಚಿಲ, ಸತೀಶ್ ಭಟ್ ಉಚ್ಚಿಲ ಇದ್ದರು.
Published on
ಪಡುಬಿದ್ರಿ: ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನ ಕಲೆಯನ್ನು ಕಲಿತವರಿಗೆ ಜೀವನ ಮೌಲ್ಯ, ಬದುಕಿನ ಸತ್ವ ತಾನಾಗಿ ವಿಧಿತವಾಗುತ್ತದೆ. ಯಕ್ಷಗಾನ ಕಲಿತ ವಿದ್ಯಾರ್ಥಿ ಶೈಕ್ಷಣಿಕ ಪರೀಕ್ಷೆಯಲ್ಲಿ ಸೋಲಲಾರ. ಬದುಕೆಂಬ ಸಾಗರದಲ್ಲಿ ಲೀಲಾಜಾಲವಾಗಿ ಈಜಾಡಿ ದಡ ಸೇರುತ್ತಾನೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲಿಕ ಮರಾಠೆ ಹೇಳಿದರು.
 ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಸಂಘದ 36ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಾತನಾಡಿದರು.
 ಹಿರಿಯ ಭಾಗವತ ಶ್ಯಾಮರಾವ್ ಪಾಲಮೆ ಪಂಜಿವಾರು ಅವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ವಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಪು ತಾಲೂಕು ಸಹಾಯಕ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿ ರಿತೇಶ್ ಕುವಾರ್ ಶೆಟ್ಟಿ, ಭಾರತೀಯ ಜೀವ ವಿವಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ರಮೇಶ್ ಉಚ್ಚಿಲ ಉಪಸ್ಥಿತರಿದ್ದರು.
 ಕಲಾ ಸಂ ಅಧ್ಯಕ್ಷ ಸತೀಶ್ ಭಟ್ ಉಚ್ಚಿಲ ಸ್ವಾಗತಿಸಿದರು. ಅನಿಲ್ ಕುವಾರ್ ವಂದಿಸಿದರು. ನಾಗೇಶ್ ಕುವಾರ್ ದೇಜಾಡಿ ವಾರ್ಷಿಕ ವರದಿ ವಾಚಿಸಿದರು. ನಾರಾಯಣ ಪಾಲನ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net