ವಿದ್ಯಾರ್ಥಿಗಳಲ್ಲಿ ಇರಬೇಕು ಸಾಮಾನ್ಯ ಜ್ಞಾನಗಳ ಭಂಡಾರ

ಉಡುಪಿಯಲ್ಲಿ ಆಯೋಜಿಸಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯನ್ನು ಎಂ.ಎಂ. ಆನಂದ ಉದ್ಘಾಟಿಸಿದರು. ಬಿ.ಜಯಕರ ಶೆಟ್ಟಿ ಇಂದ್ರಾಳಿ, ಶ್ವೇತಾ, ಯಾದವ ಟಿ., ದಯಾನಂದ ಡಿ., ಹರೀಶ ಕಿಣಿ, ಸುಧೀರ ವೈ., ಅನೂಷಾ ಕೋಟ್ಯಾನ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯನ್ನು ಎಂ.ಎಂ. ಆನಂದ ಉದ್ಘಾಟಿಸಿದರು. ಬಿ.ಜಯಕರ ಶೆಟ್ಟಿ ಇಂದ್ರಾಳಿ, ಶ್ವೇತಾ, ಯಾದವ ಟಿ., ದಯಾನಂದ ಡಿ., ಹರೀಶ ಕಿಣಿ, ಸುಧೀರ ವೈ., ಅನೂಷಾ ಕೋಟ್ಯಾನ್​ ಇದ್ದರು.
Published on: 

* ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ

* ಸಹಕಾರ ಕ್ಷೇತ್ರದ ಪ್ರಬಂಧ, ಚರ್ಚಾ ಸ್ಪರ್ಧೆ ಉದ್ಘಾಟನೆ

ಉಡುಪಿ: ಶಿಕ್ಷಣವೆಂದರೆ ಕೇವಲ ಅಂಕಗಳಿಗೆ ಮಾತ್ರವಲ್ಲ. 100 ಅಂಕ ಗಳಿಕೆಗೆ ಇಂದು ಕಷ್ಟವೇನೂ ಇಲ್ಲ. ಆದರೆ, ಇಂದಿನ ಮಕ್ಕಳಿಗೆ ಆಡಳಿತಾತ್ಮಕ ವಿಷಯದ ಜ್ಞಾನಗಳ ಕೊರತೆ ಇದೆ. ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠ, ಜಿಲ್ಲೆಯ ಶಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಎಂ, ಪಿಎಂ ಯಾರು ಎಂಬ ಮಾಹಿತಿ ತಮಗಿರಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾನ್ಯ ಜ್ಞಾನಗಳ ಭಂಡಾರ ತಮ್ಮಲ್ಲಿರಬೇಕು ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.

ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.
ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.

ಉಡುಪಿ ಬಡಗಬೆಟ್ಟು ಕ್ರೆಡಿಟ್​ ಕೋ-ಆಪ್​ ಬ್ಯಾಂಕ್​ನ ಜಗನ್ನಾಥ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ನಿ. ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜ್​ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಸಹಕಾರ ಕ್ಷೇತ್ರ ವಿಷಯ ಕುರಿತ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಭೆಗೆ ವೇದಿಕೆ

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಎಂ.ಎಂ. ಆನಂದ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಿಳಿವಳಿಕೆ ಎಷ್ಟಿದೆ ಎಂದು ಸಾಬೀತುಪಡಿಸಲು ಇದು ಉತ್ತಮ ವೇದಿಕೆ. ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮೊಳಗಿರುವ ಪ್ರತಿಭೆ ಅನಾವರಣಗೊಳಿಸಿ ಹೆತ್ತವರಿಗೂ, ಶಾಲೆಗೂ ಕೀರ್ತಿ ತರಬೇಕು ಎಂದರು.

ಕ್ರಿಶ್ಚಿಯನ್​ ಪಿಯು ಕಾಲೇಜ್​ನ ಪ್ರಾಂಶುಪಾಲೆ ಶ್ವೇತಾ ಮಾತನಾಡಿದರು. ನಿವೃತ್ತ ಉಪನ್ಯಾಸಕರಾದ ಯಾದವ ಟಿ., ದಯಾನಂದ ಡಿ., ಜಿಲ್ಲಾ ಸಹಕಾರ ಯೂನಿಯನ್​ನ ಆಡಳಿತ ಮಂಡಳಿ ಸದಸ್ಯರಾದ ಹರೀಶ ಕಿಣಿ, ಸುಧೀರ ವೈ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸ್ವಾತಿ ಕುಂದರ್​ ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯೂನಿಯನ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೂಷಾ ಕೋಟ್ಯಾನ್​ ಕಾರ್ಯಕ್ರಮ ನಿರ್ವಹಿಸಿದರು.

ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 'ಸಹಕಾರಾಭಿವೃದ್ಧಿಯಲ್ಲಿ ರಾಷ್ಟ್ರೀಯ ನೀತಿಯ ಪರಿಣಾಮ' ವಿಷಯದ ಪ್ರಬಂಧ ಹಾಗೂ ಕಾಲೇಜ್​ ವಿದ್ಯಾರ್ಥಿಗಳಿಗಾಗಿ 'ಸಹಕಾರಿ ಮಾದರಿಯು ಹಳೆಯದಾಗಿದ್ದು, ಜಾಗತಿಕ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ' ಎಂಬ ವಿಷಯದಲ್ಲಿ ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಹಕಾರ ಸಂಗಳ ಕಾರ್ಯವೈಖರಿ ಹಾಗೂ ಈ ಕ್ಷೇತ್ರದ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಸಹಕಾರ ಚಳವಳಿಯ ಅಭಿವೃದ್ಧಿಗಾಗಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜನಸಾಮಾನ್ಯರಿಗೂ ಸಹಕಾರದ ಕುರಿತು ಅರಿವು ಮೂಡಿಸುವುದು ರಾಜ್ಯ ಸಹಕಾರಿ ಮಂಡಳದ ಹಾಗೂ ಜಿಲ್ಲಾ ಸಹಕಾರ ಯೂನಿಯನ್​ನ ಉದ್ದೇಶ.
ಬಿ.ಜಯಕರ ಶೆಟ್ಟಿ ಇಂದ್ರಾಳಿ. ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ.