ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಸತ್ಯೇಂದ್ರ ಪೈ, ಶಿವಾನಂದ ಕೋಟ್ಯಾನ್ ಕಟಪಾಡಿ, ರಜಾಕ್ ಪುತ್ತೂರು, ಅಶ್ವಿನಿ ಸಂದೀಪ್, ಪ್ರಕಾಶ್ ಸುವರ್ಣ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಮಾನ್ಯ ಕಲ್ಚರಲ್ ಆ್ಯಂಡ್ ಎಜುಕೇಷನಲ್ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ, ಸುನೀಲ್ ಸಾಲ್ಯಾನ್ ಕಡೆಕಾರ್, ಪತ್ರಕರ್ತ ರವೀಂದ್ರ ಶೆಟ್ಟಿ, ಎಸ್‌ವಿಎಸ್ ವಿದ್ಯಾವವರ್ಧಕ ಸಂಘದ ಸದಸ್ಯ ಗಣೇಶ್ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ, ಎಸ್‌ವಿಎಸ್, ಎಸ್‌ವಿಕೆ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ದೇವೇಂದ್ರ ನಾಯಕ್ ಹಾಗೂ ಸುಜಾ ಜೆ. ಉಪಸ್ಥಿತರಿದ್ದರು. ಪ್ರಕಾಶ್ ಸುವರ್ಣ ನಿರೂಪಿಸಿದರು. ಭಾಸ್ಕರ್ ಕಾಮತ್ ವಂದಿಸಿದರು.