ಉಡುಪಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯು ಭಯೋತ್ಪಾದಕರಿಗೆ ಪ್ರೇರಣೆ ಕೊಡುವ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅವಕಾಶ ಮಾಡಿಕೊಟ್ಟಂತಿದೆ. ಪ್ರತಿಭಟನಾ ನಿರತ ಕಾಕ್ರೋಚ್ಗಳಿಗೆ ಗಲಭೆ, ಗಲಾಟೆ, ನೂಕಾಟ, ಗೋಲಿಬಾರ್, ಪ್ರಾಣ ಹಾನಿ ಆಗಬೇಕು ಎನ್ನುವ ನಿರೀಕ್ಷೆ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗಟ್ಟಿಯಾಗಿ ನಿಂತು ಅದ್ಯಾವುದೂ ಘಟಿಸಲು ಅವಕಾಶ ನೀಡಿಲ್ಲ. ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.