ತಂತ್ರಜ್ಞಾನ ಕ್ಷೇತ್ರದಲ್ಲಾಗಲಿ ವಿದ್ಯಾರ್ಥಿಗಳ ಸಾಧನೆ

ಮುಂಡ್ಕೂರು ವಿದ್ಯಾವರ್ಧಕದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಶಾಸಕ ವಿ.ಸುನೀಲ್ ಕುವಾರ್, ವಿ.ಪ.ಸದಸ್ಯ ಎಸ್.ಎಲ್.ಭೋಜೇಗೌಡ, ರಂಗಸ್ವಾಮಿ ಮತ್ತಿತರರಿದ್ದರು.
ಮುಂಡ್ಕೂರು ವಿದ್ಯಾವರ್ಧಕದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಶಾಸಕ ವಿ.ಸುನೀಲ್ ಕುವಾರ್, ವಿ.ಪ.ಸದಸ್ಯ ಎಸ್.ಎಲ್.ಭೋಜೇಗೌಡ, ರಂಗಸ್ವಾಮಿ ಮತ್ತಿತರರಿದ್ದರು.
Published on
ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ವಿದ್ಯಾವರ್ಧಕದ ಪ್ರಯತ್ನ ಶ್ಲಾಘನೀಯ. ತಂತ್ರಜ್ಞಾನದ ಕಡೆಗೆ ವಿದ್ಯಾರ್ಥಿಗಳು ಸಾಗುವ ಮೂಲಕ ಶೈಕ್ಷಣಿಕವಾಗಿಯೂ ಸಾಧನೆ ಮಾಡಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜಿನಲ್ಲಿ ಆಡಳಿತ ಮಂಡಳಿ, ಮುಂಬೈನ ವಿದ್ಯಾದುರ್ಗ ಟ್ರಸ್ಟ್, ಮುಂಡ್ಕೂರಿನ ವೇದಾವತಿ ರಾವೇಂದ್ರ ಪ್ರಭು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ, ಸಾಧಕರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜಿನ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ಘೋಷಿಸಿದರು ಹಾಗೂ ವಸತಿ ನಿಲಯ ಪ್ರಾರಂಭಕ್ಕೆ ಇಲಾಖೆ ಮೂಲಕ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು ವರ್ಗಾವಣೆಗೊಂಡ ರಂಗಸ್ವಾಮಿ ಅವರನ್ನು ಪತ್ನಿ ಅಂಬಿಕಾ ಸಹಿತ ಸನ್ಮಾನಿಸಿದರು. ಸಾಧಕರನ್ನು ಗೌರವಿಸಲಾಯಿತು. ಮುಂಡ್ಕೂರಿನ ವೇದಾವತಿ ರಾವೇಂದ್ರ ಪ್ರಭು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ, ಪಠ್ಯ ಪೂರಕ ಸಾಮಗ್ರಿ ನೀಡಲಾಯಿತು. ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು.
ಪ್ರಮುಖರಾದ ರಾಮದಾಸ ಆಚಾರ್ಯ, ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಡಾ.ಪಿ.ಬಾಲಕೃಷ್ಣ ಆಳ್ವ, ಪಾಂಡುರಂಗ ಪ್ರಭು, ಎಂ.ಜಿ.ಕರ್ಕೇರ, ಕೋರಿಬೆಟ್ಟು ಗುತ್ತು ಸುರೇಂದ್ರ ಎಸ್.ಶೆಟ್ಟಿ, ಸಚ್ಚೇರಿಪೇಟೆ ನಡಿಗುತ್ತು ಜಗದೀಶ್ ಶೆಟ್ಟಿ, ಡಾ.ರಾಜಾರಾಮ ರೈ, ಶರತ್ ಶೆಟ್ಟಿ, ಶ್ರೀಕಾಂತ ಮೂಲ್ಯ, ಮಾಲತೇಶ್ ಇಂಗಳಕಿ, ಸವಿತಾ ಸದಾನಂದ್, ಉಮಾಧರ ಆಚಾರ್ಯ, ಪ್ರಕಾಶ್ ಕೆ.ಎನ್., ಅಶೋಕ್ ಶೆಟ್ಟಿ, ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ, ಅವಿಲ್ ಡಿಸೋಜ, ಭಾಸ್ಕರ ಶೆಟ್ಟಿ, ಜನ್ನೋಜಿ ರಾವ್, ನಳಿನಿ ಶೆಟ್ಟಿ ಅಂಗಡಿಗುತ್ತು, ದೇವಪ್ಪ ಸಪಳಿಗ, ಗಣೇಶ್ ರಾವ್, ಸದಾನಂದ ಪೂಜಾರಿ, ಅಕ್ಷತಾ, ಮಾಲತಿ, ಶರತ್, ಪ್ರಭಾಕರ ಶೆಟ್ಟಿ, ಪ್ರಕಾಶ್ ನಾಯಕ್ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net