ಜೀವನ ಪರ್ಯಂತದ ಪ್ರಕ್ರಿಯೆ ಕಲಿಕೆ

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗೋಕುಲದಾಸ್​ ನಾಯಕ್​,  ಡಾ.ಶ್ರೀಧರ್​ ಆರ್​. ಪೈ, ಪ್ರೊ. ವನಿತಾ ಮಯ್ಯ, ಡಾ. ಎಂ.ವಿಶ್ವನಾಥ್​ ಪೈ, ಡಾ.ದೇವಿದಾಸ್​ ಎಸ್​. ನಾಯ್ಕ, ಪ್ರೊ.ಮಾಲತಿದೇವಿ, ಪ್ರೊ. ಶೈಲಜಾ ಎಚ್​., ಪ್ರೊ.ವೀರಾ ಐಡಾ ಪಿಂಟೋ, ಪ್ರೊ.ಅನಿಲಕುಮಾರ್​ ಇದ್ದರು.

Published on

* ಗೋಕುಲದಾಸ್​ ನಾಯಕ್​ ಅನಿಸಿಕೆ

* ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆ 

ಉಡುಪಿ: ಕಲಿಕೆ ಪದವಿಯೊಂದಿಗೆ ಅಂತ್ಯವಾಗುವುದಿಲ್ಲ. ಅದು ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ. ಹಾಗಾಗಿ ದಿನವೂ ಹೊಸತು ಕಲಿಯುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಕಾಲೇಜ್​ನ ಹಳೆಯ ವಿದ್ಯಾರ್ಥಿ, ಮಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್​ ನಾಯಕ್​ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜ್​ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜ್​ನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಕಾಡೆಮಿ ಆಫ್​ ಜನರಲ್​ ಎಜುಕೇಷನ್​ನ ಆಡಳಿತಾಧಿಕಾರಿ ಡಾ.ಶ್ರೀಧರ್​ ಆರ್​. ಪೈ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜ್​ನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್​ ಪೈ, ಸಂಧ್ಯಾ ಕಾಲೇಜ್​ನ ಪ್ರಾಂಶುಪಾಲ ಡಾ.ದೇವಿದಾಸ್​ ಎಸ್​. ನಾಯ್ಕ, ಪ.ಪೂ. ಕಾಲೇಜ್​ನ ಪ್ರಾಂಶುಪಾಲೆ ಪ್ರೊ.ಮಾಲತಿ ದೇವಿ, ಐಕ್ಯುಎಸಿ ಸಂಯೋಜಕಿ ಪ್ರೊ. ಶೈಲಜಾ ಎಚ್​., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ಸಹ ಕ್ಷೇಮಪಾಲನಾಧಿಕಾರಿ ಪ್ರೊ.ಅನಿಲಕುಮಾರ್​, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಘದ ಅಧ್ಯಕ್ಷ ನಂದನ್​ ಕುಂದರ್​ ಸ್ವಾಗತಿಸಿದರು. ಎಂಎಸ್ಸಿ ಪ್ರತಿನಿಧಿ ಆಶಿಶ್​ ಶೆಟ್ಟಿಗಾರ್​ ವಂದಿಸಿದರು. ವಿದ್ಯಾರ್ಥಿನಿಯರಾದ ಸಮ್ರಾ, ದೃಶ್ಯಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net