ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜ್ನಲ್ಲಿ ವಿದ್ಯಾರ್ಥಿ ಸಂಘವನ್ನು ಪ್ರಾಂಶುಪಾಲ ಕೆ. ಜಗದೀಶ್ ನಾವುಡ ಉದ್ಘಾಟಿಸಿದರು. ಈಶಪ್ರಿಯ ಶ್ರೀ, ಡಾ. ಎ.ಪಿ. ಭಟ್, ಟಿ. ಪ್ರಶಾಂತ್ ಹೊಳ್ಳ, ಸಿ.ಸುರೇಶ ತುಂಗ, ಉಷಾಕಿರಣ್, ದಿವ್ಯಾ ಇತರರಿದ್ದರು.
Published on:
Copied
Follow Us
* ಈಶಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ
* ಪಿಪಿಸಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ
ಉಡುಪಿ: ಶಿಕ್ಷಣ ಸಂಸ್ಥೆಗಳು ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತವಾಗಿ ಮಕ್ಕಳಿಗೆ ಬೋಧನೆ ಮಾಡಬಾರದು. ಅದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕೇಂದ್ರವಾಗಿರಬೇಕು. ವಿದ್ಯಾರ್ಥಿಗಳೂ ಸಹ ತಾನು ರ್ಯಾಂಕ್ ಗಳಿಸಬೇಕೆಂದು ಓದುವುದಕ್ಕಿಂತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಜ್ಞಾನ ಸಂಪಾದನೆಗಾಗಿ ಕಲಿಯಬೇಕೆಂಬ ಭಾವ ಮೈಗೂಡಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್ (ಪಿಪಿಸಿ)ನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆತ್ಮ ವಿಶ್ವಾಸ ಅಗತ್ಯ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ್ ನಾವುಡ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳನ್ನೇರಲು ಛಲ ಮತ್ತು ಆತ್ಮವಿಶ್ವಾಸ ಅಗತ್ಯ ಎಂದರು. ಹಲವು ಮಹಾನ್ ವ್ಯಕ್ತಿಗಳ ಸಾಧನೆ ವಿವರಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್, ಗೌರವ ಖಜಾಂಚಿ ಸಿಎ ಟಿ. ಪ್ರಶಾಂತ್ ಹೊಳ್ಳ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಸಿ.ಸುರೇಶ ತುಂಗ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಗೌಪ್ಯ ಪ್ರಮಾಣವಚನ ಬೋಧಿಸಿದರು.
ವಿದ್ಯಾರ್ಥಿ ನಾಯಕಿ ಆಶ್ನಿ ಸಿಯೋನಾ ಸಲ್ಡಾನಾ, ಕಾರ್ಯದರ್ಶಿ ಗೌರಿ ದೀಕ್ಷಿತ್, ಸಹಕಾರ್ಯದರ್ಶಿ ವಿನೀತ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಉಪನ್ಯಾಸಕಿ ಉಷಾಕಿರಣ್ ಸ್ವಾಗತಿಸಿದರು. ದಿವ್ಯಾ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಶಿನಿ ನವೀನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.