ಅರ್ಪಣಾ ಮನೋಭಾವದಿಂದ ಬದುಕು ಫಲಪ್ರದ

ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಜೀವ ಜಿ. ಹೇಳಿಕೆ
ಕೋಟ ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವನ್ನು ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಂಜೀವ ಜಿ. ಉದ್ಘಾಟಿಸಿದರು. ಪ್ರಮುಖರಾದ ಡಾ.ರಾಜೇಂದ್ರ ಎಸ್.ನಾಯಕ, ರಿತೀಶ್, ನಿತೇಶ್, ಅಫಿಫಾ ಅಲ್ಫಿಯಾ, ಪ್ರೊ.ರಮೇಶ ಆಚಾರ್ ಇದ್ದರು.

Published on

ಕೋಟ: ಯುವಜನತೆ ಭವಿಷ್ಯದ ಭಾರತದ ಭರವಸೆಯಾಗಿದ್ದು, ತಮ್ಮ ದ್ಯೇಯೋದ್ದೇಶಗಳಿಗೆ ಕಟಿಬದ್ಧರಾಗಬೇಕಿದೆ. ಕೌಶಲ ವೃದ್ಧಿಸಿಕೊಂಡು ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳಬೇಕು. ಸ್ವಾರ್ಥದಿಂದ ಹೊರಬಂದು ಅರ್ಪಣಾ ಮನೋಭಾವದಿಂದ ತಮ್ಮ ಬದುಕನ್ನು ಫಲಪ್ರದವಾಗಿಸಿಕೊಳ್ಳಬೇಕು ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಂಜೀವ ಜಿ. ಹೇಳಿದರು.

ಕೋಟ ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರಿತೀಶ್, ನಿತೇಶ್, ಅಫಿಫಾ ಅಲ್ಫಿಯಾ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ ಆಚಾರ್ ಉಪಸ್ಥಿತರಿದ್ದರು. ಮಿಸ್ರಿಯಾ ಮತ್ತು ಬಳಗದವರು ಪ್ರಾರ್ಥಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಶಂಕರ ನಾಯ್ಕ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಸಂತೋಷ್ ನಾಯ್ಕ ಎಚ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net