ಕಾಸರಗೋಡು: ಆಸ್ಪತ್ರೆಗೆ ದಾಖಲಾಗಿದ್ದ ಪತಿಯನ್ನು ನೋಡಿಕೊಳ್ಳುತ್ತಿದ್ದ ಪತ್ನಿಯ 52,000 ರೂ. ನಗದು ಹಾಗೂ ಹಲವು ದಾಖಲೆಗಳಿದ್ದ ಪರ್ಸ್ ಕಳವಾಗಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ರ, ಮಾಯಿಪ್ಪಾಡಿ ಕೈವಲ್ಯ ಹೌಸ್‌ನ ಟಿ.ಎ.ಅಬ್ದುಲ್ ಖಾದರ್ ದೂರು ನೀಡಿದ್ದಾರೆ. ಅಸೌಖ್ಯಪೀಡಿತರಾಗಿದ್ದ ತಂದೆಯ ಆರೈಕೆಗಾಗಿ ಆಸ್ಪತ್ರೆಗೆ ತೆರಳಿದ್ದ ತಾಯಿ ನಗದು, ದಾಖಲೆ ಹೊಂದಿದ್ದ ಬ್ಯಾಗನ್ನು ಆಸ್ಪತ್ರೆ ಕೊಠಡಿಯ ಮೇಜಿನ ಡ್ರಾಯರ್‌ನಲ್ಲಿ ಇಟ್ಟಿದ್ದರು. ಕೆಲ ಹೊತ್ತಿನ ಬಳಿಕ ಬ್ಯಾಗ್ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.