

ಕಾಸರಗೋಡು: ಊಟ ಮಾಡುವಾಗ ಕುಸಿದುಬಿದ್ದು ಕುಂಬಳೆ ಕಂಟಂಗೇರಡ್ಕ ಅಬ್ದುಲ್ಲ ಎಂಬುವರ ಪುತ್ರ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಮುಬಾರಿಸ್ (18) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಕುಸಿದು ಬಿದ್ದರು.
ತಕ್ಷಣ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿದೆ ಮೃತಪಟ್ಟಿದ್ದಾರೆ.
ಮಂಗಳೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಪ್ರಥಮ ವರ್ಷ ಪದವಿ ಕಲಿಯುತ್ತಿದ್ದರು. ಮುಬಾರಿಸ್ ಎಂಎಸ್‌ಎಫ್ ಕುಂಬಳೆ ವಲಯ ಸಮಿತಿ ಸದಸ್ಯರಾಗಿದ್ದರು.