ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

 ಶ್ರವಣ್
ಶ್ರವಣ್
Published on

ಬೆಳ್ತಂಗಡಿ: ತಾಲೂಕಿನ ಖಾಸಗಿ ಪ್ರೌಢಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ವಾಡಿಕೊಂಡಿರುವ ಟನೆ ಭಾನುವಾರ ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳದಲ್ಲಿ ನಡೆದಿದೆ.

ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ ಭರತ್ ಗೌಡ ಅವರ ಪುತ್ರ ಶ್ರವಣ್ ಬಿ.ಕೆ. (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆ.29ರಂದು ಸಂಜೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕ, ಮರುದಿನ ಬೆಳಗ್ಗೆ ಮನೆಯ ಮೇಲ್ಛಾವಣಿಯಲ್ಲಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ವಾಡಿಕೊಂಡಿದ್ದಾನೆ.

ಕುಟುಂಬಸ್ಥರು ತಕ್ಷಣ ಆತನನ್ನು ಆಸ್ಪತ್ರೆಗೆ ಒಯ್ಯಲು ಪ್ರಯತ್ನಿಸಿದರೂ, ಅದಾಗಲೇ ಮೃತಪಟ್ಟಿದ್ದ ಎಂದು ಹೇಳಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net