ಈ ಕುಟುಂಬ ಬೆದ್ರಂಪಳ್ಳದ ಅಬ್ದುಲ್ಲಕುಞಿ ಎಂಬುವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ನಡೆಸುತ್ತಿತ್ತು. ಭಾನುವಾರ ಮಧ್ಯಾಹ್ನ ಪಾಲಕರು ಅಂಗಡಿಗೆ ತೆರಳಿದ ವೇಳೆ ಶ್ರೀಹರಿ, ಸಹೋದರ-ಸಹೋದರಿಯರೊಂದಿಗೆ ಕ್ವಾರ್ಟರ್ಸ್‌ನಲ್ಲಿ ಆಟವಾಡುತ್ತಿದ್ದರು. ಬಳಿಕ ಪಾಲಕರು ಮನೆಗೆ ವಾಪಸಾದಾಗ, ಮನೆ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಒಡೆದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.