

ಕುಂದಾಪುರ:ಎಸ್.ವಿ.ಶಾಲೆಮೈದಾನದಲ್ಲಿರುವ ತ್ಯಾಜ್ಯವಿಲೇವಾರಿ ವಾಡಬೇಕು.ಶಾಲೆವಠಾರದಲ್ಲಿ ಬಿಡಾಡಿ ದನಕರುಗಳಕಾಟ ಹಾಗೂ ಬೀದಿ ನಾಯಿಗಳ ಹಾವಳಿಹೆಚ್ಚಾಗಿದ್ದು ನಿಯಂತ್ರಿಸಬೇಕು,ಶಾಲೆವಠಾರದಲ್ಲಿ ಸಾರ್ವಜನಿಕರುತಿರುಗಾಡದಂತೆ ಕ್ರಮಕೈಗೊಳ್ಳಬೇಕು,ಮಳೆಗಾಲದಲ್ಲಿರಸ್ತೆ ಮೇಲೆ ವಿಪರೀತ ನೀರು ನಿಂತುಸಾರ್ವಜನಿಕರು ಮತ್ತು ಮಕ್ಕಳಿಗೆಆಗುತ್ತಿರುವ ತೊಂದರೆಯನ್ನುಪರಿಹರಿಸಬೇಕು.ಬಸ್‌ಗಳಲ್ಲಿಮಿತಿಮೀರಿದ ಪ್ರಯಾಣಿಕರು ಮತ್ತುಮಕ್ಕಳನ್ನು ತುಂಬಿಸಿಕೊಂಡುಹೋಗುತ್ತಿರುವುದನ್ನು ನಿಲ್ಲಿಸಬೇಕು.ಶಾಲೆಪ್ರಾರಂಭ ಮತ್ತು ಬಿಡುವ ಸಮಯದಲ್ಲಿಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕುಎಂದು ಎಸ್.ವಿ.ಪದವಿಪೂರ್ವ ಪ್ರೌಢಶಾಲೆ ವಿದ್ಯಾರ್ಥಿಶ್ರೇಜಸ್ ಮತ್ತು ಸರ್ಕಾರಿ ಉರ್ದುಶಾಲೆ ವಿದ್ಯಾರ್ಥಿ ಆಯಿಷಾಆಗ್ರಹಿಸಿದರು.
ಗಂಗೊಳ್ಳಿಯಶ್ರೀ ವೀರೇಶ ವಾಂಗಲ್ಯ ಮಂದಿರದಲ್ಲಿಮಂಗಳವಾರ ನಡೆದ ಗಂಗೊಳ್ಳಿ ಗ್ರಾಮಪಂಚಾಯಿತಿಯ 2025-26ನೇಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷಗ್ರಾಮಸಭೆಯಲ್ಲಿ ಮಕ್ಕಳು ಸಮಸ್ಯೆಗಳಬಗ್ಗೆ ಸಭೆಯ ಗಮನಕ್ಕೆ ತಂದರು.
ಮುಖ್ಯರಸ್ತೆ ಹಾಗೂ ಒಳರಸ್ತೆಯಲ್ಲಿವಾಹನಗಳು ವೇಗವಾಗಿ ಸಂಚರಿಸುತ್ತಿದ್ದು,ವಾಹನಗಳವೇಗಕ್ಕೆ ನಿಯಂತ್ರಣ ಹಾಕಬೇಕುಮತ್ತು ರಸ್ತೆಗಳಲ್ಲಿ ಹಂಪ್ಸ್ನಿರ್ಮಿಸಬೇಕು ಎಂದು ಸ್ಟೆಲ್ಲಾವಾರೀಸ್ ಶಾಲೆ ವಿದ್ಯಾರ್ಥಿ ಮನವಿವಾಡಿದರು.
ಗ್ರಾಪಂಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆವಹಿಸಿದ್ದರು.ಮಹಿಳೆಯರುಮತ್ತು ಮಕ್ಕಳ ರಕ್ಷಣೆ ಬಗ್ಗೆವಕೀಲೆ ಮಲ್ಲಿಕಾ ಜಯಂತ್,ಮಕ್ಕಳಹಕ್ಕುಗಳ ಕಾನೂನುಗಳ ಬಗ್ಗೆಶಿಕ್ಷಕಿ ಚಂದ್ರಕಲಾ,ಮಹಿಳೆಯರಮತ್ತು ಮಕ್ಕಳ ಆರೋಗ್ಯದ ಬಗ್ಗೆಡಾ.ಅಮಿತಾವಾಹಿತಿ ನೀಡಿದರು.
ಗಂಗೊಳ್ಳಿಪೊಲೀಸ್ ಠಾಣೆ ಎಎಸ್‌ಐ ನವೀನ್,ಅಂಗನವಾಡಿಮೇಲ್ವಿಚಾರಕಿ ರೇಖಾ,ವಿದ್ಯಾರ್ಥಿಪ್ರತಿನಿಧಿಗಳಾದ ಸೌಜನ್ಯಾ ಮತ್ತುಶ್ರೀಶನ್,ಗ್ರಾಪಂಕಾರ್ಯದರ್ಶಿ ಅನೂಪ್ ಶೇಟ್,ಗ್ರಾಪಂ.ಸದಸ್ಯರು,ವಿವಿಧಶಾಲೆಗಳ ವಿದ್ಯಾರ್ಥಿಗಳು,ಶಿಕ್ಷಕರು,ಗ್ರಾಪಂಸಿಬ್ಬಂದಿ,ಅಂಗನವಾಡಿಮತ್ತು ಆಶಾ ಕಾರ್ಯಕರ್ತೆಯರುಮೊದಲಾದವರು ಉಪಸ್ಥಿತರಿದ್ದರು.ಪಿಡಿಒರವಿ ಸ್ವಾಗತಿಸಿದರು.ಗ್ರಾಪಂಸಿಬ್ಬಂದಿ ನಾರಾಯಣ ಶ್ಯಾನುಭಾಗ್ಕಾರ್ಯಕ್ರಮ ನಿರ್ವಹಿಸಿದರು.
ಕಳೆದಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿಎರಡನೇ ರ‌್ಯಾಂಕ್ ಪಡೆದ ಸುಶ್ಮಿತಾ,ಶೈಕ್ಷಣಿಕಸಾಧಕರಾದ ಮನಾಲಿ,ಸುಮಂತ್ಖಾರ್ವಿ ಮತ್ತು ಹಿಮೇಶ್ ಅವರನ್ನುಗೌರವಿಸಲಾಯಿತು.