ಕಳವಾಗಿದ್ದ ಲ್ಯಾಪ್‌ಟಾಪ್‌ಗಳು ಪೊದೆಯಲ್ಲಿ ಪತ್ತೆ

Crime
Crime
Published on
ಕಾಸರಗೋಡು: ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಯಿಂದ ಕಳವಾಗಿದ್ದ ಲ್ಯಾಪ್‌ಟಾಪ್‌ಗಳು ಸಮೀಪದ ಪೊದೆಯ ಬಳಿ ಪತ್ತೆಯಾಗಿವೆ. ಕಳೆದ ಸೋಮವಾರ ರಾತ್ರಿ ಗ್ರಾಮ ಕಚೇರಿಯ ಬಾಗಿಲಿನ ಬೀಗ ಒಡೆದು ನುಗ್ಗಿದ ಕಳ್ಳರು ಮೂರು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದರು.
ಮಂಗಳವಾರ ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಆಗಮಿಸಿದಾಗ ಬಾಗಿಲಿನ ಬೀಗ ಮುರಿಗದು ಲ್ಯಾಪ್‌ಟಾಪ್ ಕಳವಾಗಿರುವುದು ತಿಳಿದು ಬಂದಿತ್ತು. ಈ ಬಗ್ಗೆ ಗ್ರಾಮಾಧಿಕಾರಿ ಶಶಿಕುಮಾರ್ ನೀಡಿದ ದೂರಿನಂತೆ ಬದಿಯಡ್ಕ ಠಾಣೆ ಪೊಲೀಸರು ನಡೆಸಿದ ತಪಾಸಣೆ ವೇಳೆ ಲ್ಯಾಪ್‌ಟಾಪ್‌ಗಳು ಸಮೀಪದ ಕುರುಚಲು ಪೊದೆಯಲ್ಲಿ ಪತ್ತೆಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net