ಆರೋಗ್ಯಪೂರ್ಣ ಜೀವನಕ್ಕೆ ವ್ಯಸನದಿಂದ ದೂರ

ಸುಬ್ರಹ್ಮಣ್ಯದಲ್ಲಿ ಠಾಣಾಧಿಕಾರಿ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಮಾದಕ ದ್ರವ್ಯಗಳ ವ್ಯಸನದ ವಿರುದ್ಧ ಜಾಗೃತಿ ಜಾಥಾ ನಡೆಯಿತು. ಎಎಸ್‌ಐ ಎಂ.ನಾರಾಯಣ ಪಾಟಾಳಿ, ಪೊಲೀಸ್ ಸಿಬ್ಬಂದಿ ಮೊದಲಾದವರಿದ್ದರು.
ಸುಬ್ರಹ್ಮಣ್ಯದಲ್ಲಿ ಠಾಣಾಧಿಕಾರಿ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಮಾದಕ ದ್ರವ್ಯಗಳ ವ್ಯಸನದ ವಿರುದ್ಧ ಜಾಗೃತಿ ಜಾಥಾ ನಡೆಯಿತು. ಎಎಸ್‌ಐ ಎಂ.ನಾರಾಯಣ ಪಾಟಾಳಿ, ಪೊಲೀಸ್ ಸಿಬ್ಬಂದಿ ಮೊದಲಾದವರಿದ್ದರು.
Published on
ಸುಬ್ರಹ್ಮಣ್ಯ: ಆರೋಗ್ಯಪೂರ್ಣ ನಾಳೆಗಳಿಗೆ ವ್ಯಸನಮುಕ್ತ ಬದುಕು ರಹದಾರಿಯಾಗುತ್ತದೆ. ಮಾದಕ ದ್ರವ್ಯಗಳ ವ್ಯಸನ ವ್ಯಕ್ತಿಯ ಆರೋಗ್ಯ ಮತ್ತು ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿಗೆ ದೊಡ್ಡ ಅಪಾಯವಾಗಿದೆ. ತಂಬಾಕು ಮತ್ತು ಮದ್ಯಪಾನದಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತವೆ. ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಆಶ್ರಯದಲ್ಲಿ ಕುಕ್ಕೆ ಶ್ರೀ ಆಟೋ ಚಾಲಕ ಸಂಘ, ಕುಕ್ಕೆಶ್ರೀ ಖಾಸಗಿ ಟ್ಯಾಕ್ಸಿ ಚಾಲಕ ಸಂಘ, ಬಿಎಂಎಸ್ ಆಟೋ ಚಾಲಕ ಸಂಘದ ಸಹಕಾರದಲ್ಲಿ ಸುಬ್ರಹ್ಮಣ್ಯದಲ್ಲಿ ಮಾದಕ ದ್ರವ್ಯಗಳ ವ್ಯಸನ ವಿರೋಧಿ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಯಾವುದೇ ರೀತಿಯ ಮದ್ಯ, ತಂಬಾಕು ಅಥವಾ ಇತರ ವ್ಯಸನಗಳಿಗೆ ಒಳಗಾಗದೆ ಉತ್ತಮ ಜೀವನ ನಡೆಸುತ್ತಿರುವ ಆಟೋ ಚಾಲಕರಾದ ಅನೀಲ್ ವಾಲಗದಕೇರಿ, ಮೋಹನ್ ದೋಣಿಮಕ್ಕಿ, ರಾಧಾಕೃಷ್ಣ ಹಾಗೂ ಟ್ಯಾಕ್ಸಿ ಚಾಲಕ ಉದಯ ಶೆಟ್ಟಿ ಅವರನ್ನು ಆಂಜನೇಯ ರೆಡ್ಡಿ ಗೌರವಿಸಿದರು.
ಎಎಸ್‌ಐ ಎಂ.ನಾರಾಯಣ ಪಾಟಾಳಿ, ಪೊಲೀಸ್ ಸಿಬ್ಬಂದಿ, ಕುಕ್ಕೆಶ್ರೀ ಆಟೋ ಚಾಲಕ ಸಂಘ, ಕುಕ್ಕೆಶ್ರೀ ಖಾಸಾಗಿ ಟ್ಯಾಕ್ಸಿ ಚಾಲಕ ಸಂಘ, ಬಿಎಂಎಸ್ ಆಟೋ ಚಾಲಕ ಸಂಘ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net