ನಮ್ಮೂರು ಆಳಿದ ರಾಜರ ಐತಿಹ್ಯದ ಅರಿವೂ ಅಗತ್ಯ

ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ ಇತಿಹಾಸ ವಿಚಾರ ಸಂಕಿರಣವನ್ನು ತಾರಾನಾಥ ಗಟ್ಟಿ ಕಾಪಿಕಾಡ್​ ಉದ್ಘಾಟಿಸಿದರು. ಡಾ. ಬಿ.ಜಗದೀಶ್​ ಶೆಟ್ಟಿ, ಡಾ. ಪಿ.ಗಣಪಯ್ಯ ಭಟ್​, ಪ್ರೊ.ಚಂದ್ರಕಾಂತ್​ ಭಟ್​, ಪೂರ್ಣಿಮಾ, ಜಯಪ್ರಕಾಶ್​ ಕೆದ್ಲಾಯ, ಸ್ನೇಹಾ ಎಸ್​., ಉದ್ಯಾವರ ನಾಗೇಶಕುಮಾರ್​, ಪ್ರೇಮನಾಥ್​ ಇದ್ದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ ಇತಿಹಾಸ ವಿಚಾರ ಸಂಕಿರಣವನ್ನು ತಾರಾನಾಥ ಗಟ್ಟಿ ಕಾಪಿಕಾಡ್​ ಉದ್ಘಾಟಿಸಿದರು. ಡಾ. ಬಿ.ಜಗದೀಶ್​ ಶೆಟ್ಟಿ, ಡಾ. ಪಿ.ಗಣಪಯ್ಯ ಭಟ್​, ಪ್ರೊ.ಚಂದ್ರಕಾಂತ್​ ಭಟ್​, ಪೂರ್ಣಿಮಾ, ಜಯಪ್ರಕಾಶ್​ ಕೆದ್ಲಾಯ, ಸ್ನೇಹಾ ಎಸ್​., ಉದ್ಯಾವರ ನಾಗೇಶಕುಮಾರ್​, ಪ್ರೇಮನಾಥ್​ ಇದ್ದರು.
Published on

* ವಿದ್ಯಾರ್ಥಿಗಳಿಗೆ ತಾರಾನಾಥ ಗಟ್ಟಿ ಕಾಪಿಕಾಡ್​ ಕಿವಿಮಾತು

* ಅಳುಪರ ಆಡಳಿತದ ಇತಿಹಾಸ ದಾಖಲಾತಿ ವಿಚಾರ ಸಂಕಿರಣ

ಉಡುಪಿ: ಶಾಲಾ-ಕಾಲೇಜುಗಳಲ್ಲಿ ದೇಶ-ವಿದೇಶಗಳ ರಾಜ-ಮಹಾರಾಜರ ಇತಿಹಾಸ ತಿಳಿದುಕೊಳ್ಳುತ್ತೇವೆ. ನಮ್ಮ ಇತಿಹಾಸ ಪಠ್ಯದಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳ ಚರಿತ್ರೆಯಿದೆ. ಆದರೆ, ನಮ್ಮ ಊರನ್ನು ಆಳಿದ ಸಾಮಂತ ಅರಸರ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ನಾಡನ್ನು ಕಟ್ಟಿದ ಅನೇಕ ಸಣ್ಣ ಸಣ್ಣ ರಾಜರ ಐತಿಹಾಸಿಕ ಆಕರಗಳೂ ಇಲ್ಲ. ವಿದ್ಯಾರ್ಥಿಗಳಿಗೆ ನಮ್ಮೂರನ್ನು ಆಳಿದ ರಾಜರು ಅಥವಾ ಸಾಮಂತರ ಇತಿಹಾಸವನ್ನೂ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್​ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿಭುದೇಶ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘದ ಸಹಭಾಗಿತ್ವದಲ್ಲಿ ಗುರುವಾರ (ಆ.6) ಆಯೋಜಿಸಿದ್ದ 'ಅಳುಪೆರೆನ ಆಡಳಿತ ಐತಿಹಾಸಿಕ ದಾಖಲಾತಿಲು' ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಅಳುಪರ ರಾಜಧಾನಿ ಉದ್ಯಾವರ

ಇತಿಹಾಸ ತಜ್ಞ ಹಾಗೂ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಉದ್ಯಾವರದ ಇತಿಹಾಸವು ಕಡಲಿನಂತೆ ವಿಸ್ತಾರವಾಗಿದೆ. ಅಳುಪ ಅರಸರ ರಾಜಧಾನಿಯಾಗಿ, ರಾಜಕೀಯ, ಆರ್ಥಿಕ, ಸಾಂಸತಿಕ ಕೇಂದ್ರವೂ ಆಗಿತ್ತು. ಲೋಕದ ಇತಿಹಾಸ ತಿಳಿದುಕೊಳ್ಳುವ ನಾವುಗಳು ನಮ್ಮೂರಿನ ಚರಿತ್ರೆಯನ್ನೂ ಅಗತ್ಯವಾಗಿ ತಿಳಿದುಕೊಳ್ಳಬೇಕಾಗಿದೆ ಎಂದರು.
ಮೂಡಬಿದರೆಯ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಪಿ.ಗಣಪಯ್ಯ ಭಟ್​ ಮಾತನಾಡಿ, ಅಳುಪರ ಆಡಳಿತ ವೈಖರಿ ಕುರಿತು ಮಾಹಿತಿ ನೀಡಿದರು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ್​ ಭಟ್​ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜು ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್​ ಕೆದ್ಲಾಯ, ಸ್ನೇಹಾ ಎಸ್​., ಉದ್ಯಾವರ ನಾಗೇಶಕುಮಾರ್​ ಉಪಸ್ಥಿತರಿದ್ದರು. 

ವಿದ್ಯಾರ್ಥಿ ಪ್ರಜ್ವಲ್​ ಪಿ. ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೇಮನಾಥ್​ ಸ್ವಾಗತಿಸಿದರು. ಪ್ರಾಧ್ಯಾಪಕ ದಾಮೋದರ್​ ಶೆಟ್ಟಿಗಾರ್​ ವಂದಿಸಿದರು. ವಿದ್ಯಾರ್ಥಿನಿ ನವ್ಯಾ ಹೆಬ್ಬಾರ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net