ಉಡುಪಿ ಶ್ರೀಕೃಷ್ಣ ಮಠದಲ್ಲಿ ವೇದವರ್ಧನ ಶ್ರೀಗಳು 'ಕೃಷ್ಣ ರಂಗ' ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಿದರು. ಡಾ. ಗಣೇಶಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಉದಯ್ ನಾಯ್ಕ್ ಇದ್ದರು.
Published on:
Copied
Follow Us
* ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜನೆ
* ಪ್ರಥಮ 10 ಸಾವಿರ ರೂ. ಬಹುಮಾನ
ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ 'ಉಡುಪಿಗೆ ಬನ್ನಿ' ವತಿಯಿಂದ ಹಾಗೂ ಎನ್.ಎನ್. ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್, ಚಿತ್ರಕೂಟ ಆಯುರ್ವೇದ, ಅನಂತ ವೈದಿಕ ಕೇಂದ್ರ ಉಡುಪಿ ಸಹಕಾರದಲ್ಲಿ ವಿಟ್ಲಪಿಂಡಿ ನಿಮಿತ್ತ 'ಕೃಷ್ಣ ರಂಗ' ರಾಜ್ಯ ಮಟ್ಟದ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.
ಉಡುಪಿ ಮಠದಲ್ಲಿ ಈ ಸ್ಪರ್ಧೆಯ ಪೋಸ್ಟರ್ಅನ್ನು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ, ಸ್ಪರ್ಧೆಯು ಯಶಸ್ವಿಯಾಗಲಿ ಎಂದು ಅನುಗ್ರಹಿಸಿದರು.
ಉಡುಪಿಗೆ ಬನ್ನಿ ನಿರ್ವಾಹಕ ಡಾ. ಗಣೇಶಪ್ರಸಾದ್ ಜಿ. ನಾಯಕ್, ಕಸಾಪ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾದ ಉಡುಪಿ ವಿಭಾಗೀಯ ಅಧ್ಯಕ್ಷ ಉದಯ್ ನಾಯ್ಕ್ ಉಪಸ್ಥಿತರಿದ್ದರು.
ಸ್ಪರ್ಧೆಯ ವಿವರ
ಸ್ಪರ್ಧಿಗಳು ಸೆ.5ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯ್ದ ಅಂಶಗಳನ್ನು ರೀಲ್ಸ್ನಲ್ಲಿ ಪ್ರಸ್ತುತಪಡಿಸಬೇಕು. ರೀಲ್ಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿ 'ಉಡುಪಿಗೆ ಬನ್ನಿ' ಕೊಲೇಬೊರೇಟ್ ಮಾಡಬೇಕು. ರೀಲ್ಸ್ ಕಳುಹಿಸಲು ಸೆ.15 ಕೊನೆಯ ದಿನ. ಸೆ.19ರಂದು ಫಲಿತಾಂಶ ಪ್ರಕಟಿಸಲಾಗುವುದು.
ಪ್ರಥಮ 10 ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಐದು ಸಾವಿರ ರೂ. ಪ್ರಶಸ್ತಿ ಪತ್ರ, 5 ಮಂದಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.