ಪ್ರತಿ ಸ್ಪರ್ಧಿಯು ಗರಿಷ್ಠ 4 ಛಾಯಾಚಿತ್ರ ಕಳುಹಿಸಬಹುದು. ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4 ಎಂಬಿಗಿಂತ ಹೆಚ್ಚು ಇರಬಾರದು. ಮೊಬೈಲ್ ಬಳಸಿ ತೆಗೆದ ಫೋಟೋ ಕಳುಹಿಸುವಂತಿಲ್ಲ. ಫೋಟೋಶಾಪ್ನಲ್ಲಿ ತಿರುಚಲಾದ ಮತ್ತು ವಾಟರ್ ಮಾರ್ಕ್ ಇರುವ ಚಿತ್ರಗಳನ್ನೂ ಪರಿಗಣಿಸುವುದಿಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದ್ದು, ಛಾಯಾಚಿತ್ರವನ್ನು ಇ-ಮೇಲ್ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು.