ರಾಜ್ಯಮಟ್ಟದ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

ಉಡುಪಿ ಮಣಿಪಾಲದಲ್ಲಿ ದಂತ ವೈದ್ಯಕಿಯ ಶಿಕ್ಷಣ ಕಾರ್ಯಾಗಾರ ನಡೆಯಿತು. ಡಾ. ಅಶೋಕ್​ ಧೋಬ್ಳೆ, ಡಾ. ದೀಪಕ ಮುಚ್ಚಾಲಾ, ಡಾ. ನಿತಿನ್​ ಬಾರ್ವೆ, ಡಾ. ವಿಶ್ವಾಸ ಪುರಾಣಿಕ, ನಿತಾಂತ ಸಿಂಗ್​, ಡಾ. ಸಯ್ಯದ್​ ಮೊಹಮ್ಮದ್​ ಫೈಝ್​, ಡಾ. ಗೌತಮ ರಾವ್​, ಡಾ. ತೇಜಕಿರಣ ಟಿ. ಶೆಟ್ಟಿ, ಡಾ. ವಿಜಯೇಂದ್ರ ರಾವ್​ ಇತರರಿದ್ದರು.
ಉಡುಪಿ ಮಣಿಪಾಲದಲ್ಲಿ ದಂತ ವೈದ್ಯಕಿಯ ಶಿಕ್ಷಣ ಕಾರ್ಯಾಗಾರ ನಡೆಯಿತು. ಡಾ. ಅಶೋಕ್​ ಧೋಬ್ಳೆ, ಡಾ. ದೀಪಕ ಮುಚ್ಚಾಲಾ, ಡಾ. ನಿತಿನ್​ ಬಾರ್ವೆ, ಡಾ. ವಿಶ್ವಾಸ ಪುರಾಣಿಕ, ನಿತಾಂತ ಸಿಂಗ್​, ಡಾ. ಸಯ್ಯದ್​ ಮೊಹಮ್ಮದ್​ ಫೈಝ್​, ಡಾ. ಗೌತಮ ರಾವ್​, ಡಾ. ತೇಜಕಿರಣ ಟಿ. ಶೆಟ್ಟಿ, ಡಾ. ವಿಜಯೇಂದ್ರ ರಾವ್​ ಇತರರಿದ್ದರು.
Published on: 

* ಐಡಿಎ ಉಡುಪಿ ಜಿಲ್ಲಾ ಶಾಖೆಯ ಸಹಕಾರ

* ತಜ್ಞ ವೈದ್ಯರಿಂದ ವಿಷಯ ಮಂಡನೆ

ಉಡುಪಿ: ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕರ್ನಾಟಕ ರಾಜ್ಯ ಶಾಖೆಯು ಐಡಿಎ ಉಡುಪಿ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಮಣಿಪಾಲದ ವ್ಯಾಲಿ ವ್ಯೂ ಕೌಂಟಿ ಕ್ಲಬ್​ನಲ್ಲಿ ರಾಜ್ಯ ಮಟ್ಟದ ದಂತ ವೈದ್ಯಕಿಯ ಶಿಕ್ಷಣ (ಸಿಡಿಇ) ಕಾರ್ಯಾಗಾರ ಆಯೋಜಿಸಿತ್ತು.

ರಾಜ್ಯ ಶಾಖೆಯ ಪದಾಧಿಕಾರಿಗಳು ಸೇರಿದಂತೆ 60ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಕಲಿಕೆ ಮತ್ತು ವೃತ್ತಿಪರ ಅನುಭವಗಳ ವಿನಿಮಯ ನಡೆಯಿತು. ದೈನಂದಿನ ದಂತ ಚಿಕಿತ್ಸೆಯಲ್ಲಿ ಅಗತ್ಯವಿರುವ ಸಂವಹನ ಮತ್ತು ರೋಗಿಗಳೊಂದಿಗಿನ ಸಮಾಲೋಚನಾ ಕೌಶಲಗಳ ಕೇಂದ್ರೀಕೃತವಾಗಿ ಕಾರ್ಯಕ್ರಮ ಜರುಗಿತು.

ವಿಚಾರಗೋಷ್ಠಿ

ಶೈಕ್ಷಣಿಕ ವಿಚಾರಗೋಷ್ಠಿಯಲ್ಲಿ ಡಾ. ಸುನಿಲ್​ ಚಿಪ್ಳೂಣ್ಕರ್​ 'ಸಮಾಲೋಚನಾ ಕೌಶಲಗಳ ಮೂಲಕ ಚಿಕಿತ್ಸೆಯಲ್ಲಿ ಯಶಸ್ಸು' ವಿಷಯದ ಕುರಿತು ಮಾತನಾಡಿದರು. ಸುಹಾಸ ಪ್ರಭು 'ರೋಗಿಗಳೊಂದಿಗೆ ಸಮಾಲೋಚನೆಗೆ ಹೊಸ ಸ್ಪರ್ಶ-ಎನ್​ಎಲ್​ಪಿ ವಿಧಾನ' ವಿಷಯ ಮಂಡಿಸಿದರು.

ರಾಜ್ಯ ಶಾಖೆಯ ನಿಯೋಜಿತ ಅಧ್ಯಕ್ಷ ಡಾ. ರಾಘವೇಂದ್ರ ಪಿಡಮಲೆ, ಸಿಡಿಇ ಅಧ್ಯಕ್ಷ ಡಾ. ಪ್ರಶಾಂತ ಆರ್​. ಮತ್ತು ಸಿಡಿಎಚ್​ ಅಧ್ಯಕ್ಷೆ ಡಾ. ಬಿಂದು ಹೊಸಮನಿ ಪ್ರತಿನಿಧಿಸಿದ್ದರು.

ಗಣ್ಯರಿಗೆ ಗೌರವ

ಅದೇ ದಿನ ಸಂಜೆ ಉಡುಪಿಯ ಹೋಟೆಲ್​ ಕಿದಿಯೂರಿನ ವಾಸುಕಿ ಸಭಾಂಗಣದಲ್ಲಿ ಐಡಿಎ ಉಡುಪಿ ಶಾಖೆಯು 'ಆ್ಯನ್​ ಇವ್ನಿಂಗ್​ ಆಫ್ ಎಮಿನೆನ್ಸ್​' ರ್ಯಕ್ರಮ ಆಯೋಜಿಸಿ ಕೇಂದ್ರ ಕಚೇರಿಯಿಂದ ಆಗಮಿಸಿದ್ದ ಗಣ್ಯರನ್ನು ಗೌರವಿಸಿತು.

ಐಡಿಎ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್​ ಧೋಬ್ಳೆ, ಗೌರವ ಖಜಾಂಚಿ ಡಾ. ದೀಪಕ ಮುಚ್ಚಾಲಾ, ಐಡಿಎ ನಿಯೋಜಿತ ಅಧ್ಯಕ್ಷ ಡಾ. ನಿತಿನ್​ ಬಾರ್ವೆ, 2027ರ ಮಹಾಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿಶ್ವಾಸ ಪುರಾಣಿಕ, ಹಿರಿಯ ವ್ಯವಸ್ಥಾಪಕ ನಿತಾಂತ ಸಿಂಗ್​ ಉಪಸ್ಥಿತರಿದ್ದರು. ಉಡುಪಿ ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ಹಲವು ಗಣ್ಯರೊಂದಿಗೆ ಸಂವಾದ ನಡೆಯಿತು.

ಐಡಿಎ ಉಡುಪಿ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ಡಾ. ಗೌತಮ ರಾವ್​, ಗೌರವ ಖಜಾಂಚಿ ಡಾ. ತೇಜಕಿರಣ ಟಿ. ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಡಾ. ವಿಜಯೇಂದ್ರ ರಾವ್​ ಮತ್ತು ಸಂಘಟನಾ ತಂಡದ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಈ ಸಮಾರಂಭವು ಐಡಿಎ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ದಂತ ವೈದ್ಯರ ನಡುವಿನ ಬಾಂಧವ್ಯ ಗಟ್ಟಿಗೊಳಿಸಿತು. ಸದಸ್ಯರ ವೃತ್ತಿಪರ ಬೆಳವಣಿಗೆಯೊಂದಿಗೆ ಸಮುದಾಯದ ಹಿತಕ್ಕಾಗಿ ಐಡಿಎ ಉಡುಪಿ ಕೈಗೊಂಡಿರುವ ಕಾರ್ಯ ಪ್ರಚುರಪಡಿಸಲೂ ಅವಕಾಶವಾಯಿತು. ದಂತ ವೈದ್ಯರಿಗೆ ವೃತ್ತಿಪರ ಅನುಭವಗಳ ವಿನಿಮಯ ಮತ್ತು ಹೊಸ ಕಲಿಕೆಗೆ ಈ ಕಾರ್ಯಕ್ರಮ ವೇದಿಕೆಯಾಗಿತ್ತು.
ಡಾ. ಸಯ್ಯದ್​ ಮೊಹಮ್ಮದ್​ ಫೈಝ್​. ಐಡಿಎ ಉಡುಪಿ ಜಿಲ್ಲಾ ಶಾಖೆಯ ಅಧ್ಯಕ್ಷ.