ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ

ಚೆಸ್ ಪಂದ್ಯಾಟ ಸಮಾರೋಪ
ರಾಜ್ಯಮಟ್ಟದ ಚೆಸ್ ಸವಾರೋಪ ಸವಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುವಾನ ವಿತರಿಸಲಾಯಿತು.
ರಾಜ್ಯಮಟ್ಟದ ಚೆಸ್ ಸವಾರೋಪ ಸವಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುವಾನ ವಿತರಿಸಲಾಯಿತು.JELWIN_9535696302
Published on: 

ಕಾರ್ಕಳ: ಚದುರಂಗವು ಬುದ್ಧಿವಂತಿಕೆ ಮತ್ತು ಏಕಾಗ್ರತೆ ಹೆಚ್ಚಿಸುವ ಮನಸ್ಸಿನ ಆಟ. ಇದರಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಕಾರ್ಕಳ ಉಪವಿಭಾಗ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ಉಡುಪಿ ಶಾಲಾ ಶಿಕ್ಷಣ ಇಲಾಖೆ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಡರ್-17 ಬಾಲಕ-ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಿ.ಎ. ಕೆ.ನಿತ್ಯಾನಂದ ಪ್ರಭು ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ.ಕೊಡವೂರು, ವಕೀಲ ರೆಹಮತುಲ್ಲ, ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉವಾನಾಥ ಕಾಪು, ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜಾರಾಮ್ ಶೆಟ್ಟಿ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಸಂತೋಷ್ ಕುವಾರ್ ಶೆಟ್ಟಿ ಉಪಸ್ಥಿತರಿದ್ದರು. ಧೀಮಹಿ ಪ್ರಾರ್ಥಿಸಿದರು. ದರ್ಶಿನಿ ನಿರೂಪಿಸಿದರು.

ಸ್ಪರ್ಧಾ ಲಿತಾಂಶ

ಬಾಲಕರ ವಿಭಾಗದಲ್ಲಿ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾ ಶಾಲೆಯ ನಂದನ್ ಎಂ.ಎಂ.ಬಿ. ಪ್ರಥಮ, ನಾಗೂರಿನ ಸಂದೀಪನ್ ಆಂಗ್ಲ ವಾಧ್ಯಮ ಶಾಲೆಯ ರಿತೇಶ್ ಕೆ. ದ್ವಿತೀಯ, ತೀರ್ಥಹಳ್ಳಿ ವಾಗ್ದೇವಿ ಶಾಲೆಯ ಪ್ರಥಮ್ ರಾವ್ ತೃತೀಯ, ಚಿಕ್ಕೋಡಿ ಜಿಲ್ಲೆಯ ಆದರ್ಶ ವಿದ್ಯಾಲಯ ಮೇಕಳಿಯ ಸಚಿನ್ ಪೂಜಾರಿ ನಾಲ್ಕನೇ ಸ್ಥಾನ, ಕುಮಟಾದ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಣವ ಉದಯ ನಾಯ್ಕಗೆ ಐದನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಧಾರವಾಡದ ಚಿನ್ಮಯ ವಿದ್ಯಾಲಯದ ಸಿವ್ರಾ ನಡಾಫ್ ಪ್ರಥಮ, ಹೊಸನಗರ ತಾಲೂಕು ಸರ್ಕಾರಿ ಪ್ರೌಢಶಾಲೆ ನಿಟ್ಟೂರಿನ ಲಿಖಿತಾ ಎಚ್.ಪಿ. ದ್ವಿತೀಯ, ಇಂದ್ರಾಳಿ ಆಂಗ್ಲ ವಾಧ್ಯಮ ಪ್ರೌಢಶಾಲೆಯ ರಿವಾ ರಾವ್ ಯು.ಬಿ. ತೃತೀಯ, ತೀರ್ಥಹಳ್ಳಿ ವಾಗ್ದೇವಿ ಶಾಲೆಯ ಆಧ್ಯಾ ಎ.ಎಚ್. ನಾಲ್ಕನೇ ಸ್ಥಾನ, ಬೆಂಗಳೂರು ಶ್ರೀಕೃಷ್ಣ ಇಂಟರ್ ನ್ಯಾಷನಲ್ ಶಾಲೆಯ ಕೃತಘ್ನಾ ಶ್ರೀನಿವಾಸ್ ಐದನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.