ಉಡುಪಿ ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಯಿತು. ಪ್ರಮುಖರಾದ ಎಸ್.ಎಲ್.ಭೋಜೇಗೌಡ, ಯೋಗೀಶ್ ಶೆಟ್ಟಿ ಬಾಲಾಜಿ, ಉದಯ ಹೆಗ್ಡೆ ಮಲ್ಲಾರ್, ಜಯರಾಮ್ ಆಚಾರ್ಯ, ಉದಯ ಆರ್.ಶೆಟ್ಟಿ, ಶ್ರೀಕಾಂತ್ ಕುಚ್ಚೂರು, ಜಯ ಪೂಜಾರಿ, ದೇವರಾಜ್ ತೊಟ್ಟಮ್, ಅನೂಸೂಯ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು ಇದ್ದರು.
ಪಡುಬಿದ್ರಿ: ಉಳುಮೆ ಮಾಡಿ ಬಿತ್ತನೆ ಮಾಡಿದ ಫಸಲು ಮಳೆ ಅಭಾವದಿಂದ ಒಣಗಿ ಹೋಗಿದೆ. ರೈತರ ಸಂಕಷ್ಟ ಕೇಳುವವರಿಲ್ಲ. ಇದುವರೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಉಡುಪಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಗರಿಷ್ಠ ಪರಿಹಾರ ಒದಗಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಉಡುಪಿ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಮುಂಗಾರು ಮಳೆ ಅಭಾವದಿಂದ ಅನೇಕ ಕಡೆ ಬರಗಾಲ ಉಂಟಾಗಿರುವ ಪ್ರದೇಶಗಳಿಗೆ ಜಾತ್ಯತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ನೇತೃತ್ವದಲ್ಲಿ ಗುರುವಾರ ಭೇಟಿ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಭತ್ತ ಹಾಗೂ ಇನ್ನಿತರ ಬೆಳೆಗಳ ಬಿತ್ತನೆ ಆಗದೆ ಬರಗಾಲದ ಛಾಯೆ ಉಂಟಾಗಿದೆ. ಹಲವಾರು ಕಡೆ ನೀರಿನ ಅಭಾವ ಉಂಟಾಗಿದೆ ಆದ್ದರಿಂದ ಸರ್ಕಾರ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.