ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುವಲ್ಲಿ ಶೇ.100 ಪ್ರಗತಿ ಸಾಧಿಸಿದ್ದಾರೆ. ಜು.25ರ ಸಂಜೆ 4 ಗಂಟೆಯ ವರೆಗೆ ಒಟ್ಟು 9,40,340 ಗಣತಿ ನಮೂನೆ ಡಿಜಿಟಲೀಕರಣಗೊಳಿಸಿದ್ದು, ಶೇ.88.39 ಪ್ರಗತಿಯಾಗಿದೆ. 14,835 ಮತದಾರರು ಮೃತಪಟ್ಟಿದ್ದು, 14,426 ಮತದಾರರು ಕಾಯಂ ಆಗಿ ಬೇರೆಡೆ ಸ್ಥಳಾಂತರ ಆಗಿದ್ದಾರೆ. 5,225 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.