ಪ್ರತಿ ಭಾರತೀಯನ ಬ್ಯಾಂಕರ್​ ಎಸ್​ಬಿಐ

ಉಡುಪಿ ಎಸ್​ಬಿಐನ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ಆಯೋಜಿಸಿದ್ದ "ಸ್ಟೇಟ್​ ಬ್ಯಾಂಕ್​ ಡೇ' ಕಾರ್ಯಕ್ರಮವನ್ನು ಡಾ. ವ್ಯಾಸರಾಜ ತಂತ್ರಿ ಉದ್ಘಾಟಿಸಿದರು. ಬಿ.ಪ್ರಕಾಶ್​ ಅಡಿಗ, ಅನಿಲ್​ ಕುಮಾರ್​, ಅಬಲಾಲ್​ ದಾಸ್​, ಅಕ್ಷಯ್​ ಭಾಗವತ್​, ಗೋವಿಂದ್​ ಜೇನಾ, ಕೀಳಂಜೆ ಕೃಷ್ಣರಾಜ ಭಟ್​, ಜಗದೀಶ್​ ಕಾಮತ್​, ಉಡುಪಿ ಶಾಖೆಯ ವಿನೋದ್​ ಕುಮಾರ್​ ಸಿಂಗ್​, ಬ್ಯಾಂಕ್​ನ ನಿವೃತ್ತ ಹಿರಿಯ ಅಧಿಕಾರಿಗಳಾದ ಮಧುಸೂದನ ಭಟ್​, ಸುಕುಮಾರ್​, ವಿಠ್ಠಲ ಶೆಟ್ಟಿಗಾರ್​, ರಾಘವೇಂದ್ರ ಆಚಾರ್​ ಇದ್ದರು.

Published on

* ಬಿ.ಪ್ರಕಾಶ್​ ಅಡಿಗ ಅಭಿಪ್ರಾಯ

* 'ಸ್ಟೇಟ್​ ಬ್ಯಾಂಕ್​ ಡೇ' ಕಾರ್ಯಕ್ರಮ

ಉಡುಪಿ: ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಸೇವೆ, ಪಾರದರ್ಶಕತೆ, ನೈತಿಕತೆ, ಸೌಜನ್ಯ ಮತ್ತು ಸುಸ್ಥಿರತೆ ಎಂಬ ಮೌಲ್ಯಗಳಿಗೆ ಪ್ರತಿಕವಾಗಿದೆ. 1806ರಲ್ಲಿ ಬ್ಯಾಂಕ್​ ಆಫ್​ ಕಲ್ಕತ್ತಾ ಆಗಿ ಆರಂಭಗೊಂಡು, 1955ರಲ್ಲಿ ಎಸ್​ಬಿಐ ಎಂದು ಮರುನಾಮಕರಣದೊಂದಿಗೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕರ್​ ಆಗಿದೆ ಎಂದು ಬ್ಯಾಂಕ್​ನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಪ್ರಕಾಶ್​ ಅಡಿಗ ಅಭಿಪ್ರಾಯಪಟ್ಟರು.
ಉಡುಪಿಯಲ್ಲಿರುವ ಎಸ್​ಬಿಐನ ಪ್ರಾದೇಶಿಕ ವ್ಯವಹಾರ ಕಚೇರಿ (ಆರ್​ಬಿಒ)ಯಲ್ಲಿ ಆಯೋಜಿಸಿದ್ದ ಸ್ಟೇಟ್​ ಬ್ಯಾಂಕ್​ ಡೇ' ಕಾರ್ಯಕ್ರಮದಲ್ಲಿ ಮಾತನಾಡಿ, 200ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್​ನ ಪರಂಪರೆ ಸ್ಮರಿಸಿದರು.

ಗ್ರಾಹಕರಿಗೆ ಸನ್ಮಾನ

ಬ್ಯಾಂಕ್​ ಗ್ರಾಹಕರು ಹಾಗೂ ಉಡುಪಿಯ ಚಾರ್ಟರ್ಡ್​ ಅಕೌಂಟೆಂಟ್​ ಅಮ್ಮುಂಜೆ ವೆಂಕಟೇಶ್​ ನಾಯಕ್​ ಮತ್ತು ಗಾಂಧಿ ಆಸ್ಪತ್ರೆಯ ವೈದ್ಯ ಡಾ. ವ್ಯಾಸರಾಜ ತಂತ್ರಿ ಅವರನ್ನು ಬ್ಯಾಂಕ್​ ಡೇ ನೀಮಿತ್ತ ಸನ್ಮಾನಿಸಲಾಯಿತು. ಹಿರಿಯ ಸಿಬ್ಬಂದಿಗೆ ಗೌರವ, ಗ್ರಾಹಕ ಸೇವಾ ಶ್ರೇಷ್ಠತೆಯ ಪ್ರತಿಜ್ಞೆ, ಹಾಗೂ ಕೇಕ್​ ಕತ್ತರಿಸುವ ಸಮಾರಂಭ ನಡೆಯಿತು.
ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಅನಿಲ್​ ಕುಮಾರ್​, ಅಬಲಾಲ್​ ದಾಸ್​, ಅಕ್ಷಯ್​ ಭಾಗವತ್​, ಗೋವಿಂದ್​ ಜೇನಾ , ಜಗದೀಶ್​ ಕಾಮತ್​, ಉಡುಪಿ ಶಾಖೆಯ ವಿನೋದ್​ ಕುಮಾರ್​ ಸಿಂಗ್​, ಬ್ಯಾಂಕ್​ನ ನಿವೃತ್ತ ಹಿರಿಯ ಅಧಿಕಾರಿಗಳಾದ ಮಧುಸೂದನ ಭಟ್​, ಸುಕುಮಾರ್​, ವಿಠ್ಠಲ ಶೆಟ್ಟಿಗಾರ್​, ರಾಘವೇಂದ್ರ ಆಚಾರ್​ ಉಪಸ್ಥಿತರಿದ್ದರು. 
ಬ್ಯಾಂಕ್​ನ ಹಿರಿಯ ಅಧಿಕಾರಿಗಳು, ವಿವಿಧ ಶಾಖಾ ವ್ಯವಸ್ಥಾಪಕರು, ಉಡುಪಿ ಜಿಲ್ಲೆಯ ಸಿಬ್ಬಂದಿ, ಅನೇಕ ಗ್ರಾಹಕರು ಪಾಲ್ಗೊಂಡಿದ್ದರು.
ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್​ ವಂದಿಸಿದರು. ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.
"

ಉಡುಪಿ ಜಿಲ್ಲೆಯಲ್ಲಿ ಎಸ್​ಬಿಐನ 33ಕ್ಕೂ ಅಧಿಕ ಶಾಖೆಗಳಿವೆ. ರೈತರು, ಮೀನುಗಾರರು, ಎಂಎಸ್​ಎಂಇಗಳು, ವಿದ್ಯಾರ್ಥಿಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಬ್ಯಾಂಕ್​ನ ಮೌಲ್ಯಗಳನ್ನು ನಾವೆಲ್ಲರೂ ಬದ್ಧತೆಯಿಂದ ಮುಂದುವರಿಸೋಣ.

— ಬಿ.ಪ್ರಕಾಶ್​ ಅಡಿಗ. ಎಸ್​ಬಿಐನ ಪ್ರಾದೇಶಿಕ ವ್ಯವಸ್ಥಾಪಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net