

ಕುಂದಾಪುರ:ಕುಂದಾಪುರವಿಧಾನಸಭಾ ಕ್ಷೇತ್ರ ವ್ಯಾಪ್ತಿಯಹೆಗ್ಗುಂಜೆ ಗ್ರಾಮದ ಮಂದಾರ್ತಿಯಲ್ಲಿಹೊಸದಾಗಿ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆರಂಭಿಸುವಂತೆ ಕುಂದಾಪುರಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಅವರು ಪ್ರಾಥಮಿಕಹಾಗೂ ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಭೇಟಿಯಾಗಿಮನವಿ ಸಲ್ಲಿಸಿದರು.
ಹೆಗ್ಗುಂಜೆಗ್ರಾಮದ ಮಂದಾರ್ತಿಯಲ್ಲಿ ಬಡವಿದ್ಯಾರ್ಥಿಗಳ ಶೈಕ್ಷಣಿಕಹಿತದೃಷ್ಟಿಯಿಂದ ಊರಿನ ಗ್ರಾಮಸ್ಥರುಸರ್ಕಾರಿ ಶಾಲೆಗೆ ಮನವಿ ಮಾಡಿದ್ದಾರೆ.ಮಂದಾರ್ತಿಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವತಿಯಿಂದ ಈಗಾಗಲೇ ಅನುದಾನಿತಪ್ರೌಢಶಾಲೆ ಮತ್ತು ಅನುದಾನ ಸಹಿತಪದವಿ ಪೂರ್ವ ಕಾಲೇಜು ನಡೆಯುತ್ತಿದ್ದುಸರ್ಕಾರಿ ಪ್ರಾಥಮಿಕ ಶಾಲೆಪ್ರಾರಂಭಿಸಿದಲ್ಲಿ ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ತುಂಬಾಅನುಕೂಲವಾಗಲಿದೆ.ಮಂದಾರ್ತಿಅನುದಾನಿತ ಹಿರಿಯ ಪ್ರಾಥಮಿಕಶಾಲೆಯಲ್ಲಿ 153ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದು.ಶಿಕ್ಷಕರಕೊರತೆಯಿಂದ ಮುಚ್ಚುವುದಾಗಿಆಡಳಿತ ಮಂಡಳಿ ತಿಳಿಸಿದೆ.ಈಎಲ್ಲ ಕಾರಣದಿಂದ ಸರ್ಕಾರಿ ಶಾಲೆಆರಂಭಿಸಬೇಕು ಎಂದು ಶಾಸಕ ಕೊಡ್ಗಿಸಚಿವರಿಗೆ ಮನವರಿಕೆ ಮಾಡಿದರು.
ಸರ್ಕಾರದಿಂದಅನುದಾನಿತ ಹಿರಿಯ ಪ್ರಾಥಮಿಕಶಾಲಾ ಆಟದ ಮೈದಾನಕ್ಕೆ ಹಂಚಿಕೆಯಾಗಿರುವ0.88ಸೆಂಟ್ಸ್ಜಾಗದಲ್ಲಿ ಸರ್ಕಾರಿ ಶಾಲೆಪ್ರಾರಂಭಿಸಲು ಅನುಮತಿ ನೀಡಿದಲ್ಲಿಶಾಲೆಗೆ ಬೇಕಾದ ಮೂಲಸೌಲಭ್ಯಗಳನ್ನುದೇವಸ್ಥಾನದ ವತಿಯಿಂದ ನೀಡುವುದಾಗಿಆಡಳಿತ ಮಂಡಳಿ ಲಿಖಿತವಾಗಿನೀಡಿರುವುದರಿಂದ ಹೆಗ್ಗುಂಜಿಗ್ರಾಮದ ಸರ್ವೇ ನಂಬರ್ 1671ಬಿನಲ್ಲಿ 2026-27ನೇಸಾಲಿನಿಂದ ಸರ್ಕಾರಿ ಶಾಲೆಪ್ರಾರಂಭಿಸಲು ಅನುಮತಿ ನೀಡಬೇಕೆಂದುಸಚಿವ ಮಧು ಬಂಗಾರಪ್ಪ ಅವರಿಗೆಶಾಸಕ ಕಿರಣ್ ಕುಮಾರ್ ಕೊಡ್ಗಿತಿಳಿಸಿದರು.