ಉಡುಪಿಯ ಶ್ರೀಕ್ಷೇತ್ರ ಶಂಕರಪುರದಲ್ಲಿ ಶ್ರೀಸಾಯಿ ಈಶ್ವರ್ ಗುರೂಜಿ 'ತ್ರಿಶಕ್ತಿ ಅಭಿಯಾನ' ಉದ್ಘಾಟಿಸಿದರು. ವಿಜಯ್ ಕೊಡವೂರು, ಗಜೇಂದ್ರ ಎಸ್.ಬಿ. ಬೈಂದೂರು, ನಾಗರಾಜ್, ವಿಜಯ್ ಕುಂದರ್, ರಾಮ ಟಿ. ಪೂಜಾರಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ಗೀತಾಂಜಲಿ ಸುವರ್ಣ, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
Published on:
Copied
Follow Us
* ಶ್ರೀಸಾಯಿ ಈಶ್ವರ್ ಗುರೂಜಿ ಅಭಿಪ್ರಾಯ
* ತ್ರಿಶಕ್ತಿ ಅಭಿಯಾನ ಉದ್ಘಾಟನೆ
ಉಡುಪಿ: ನಮ್ಮ ಪೂರ್ವಜರಿಗೆ ಆಟಿ ತಿಂಗಳು ಬಹಳ ಕಷ್ಟದ ಸಮಯವಾಗಿತ್ತು. ಅವರೆಲ್ಲರೂ ಸೊಪ್ಪು, ಗೆಡ್ಡೆ-ಗೆಣಸು ತಿಂದು ಜೀವಿಸುತ್ತಿದ್ದರು. ಇಂದು ಅಂತಹ ಪರಿಸ್ಥಿತಿ ಇಲ್ಲ. ದೇಶ, ದೇಶಾಭಿಮಾನ ಇದ್ದರೆ ಮಾತ್ರ ನಾವೆಲ್ಲ ಬದುಕಿರಲು ಸಾಧ್ಯ. ರಾಷ್ಟ್ರದ ಹಿತಕ್ಕೆ ವಿರೋಧವಾಗಿ ವರ್ತಿಸುವುದು ಅಪರಾಧ. ಹಿರಿಯರ ಮಾರ್ಗದರ್ಶನದಂತೆ ಅಪೂರ್ವ ಜೀವನ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಶಂಕರಪುರದ ದ್ವಾರಕಾಮಯಿ ಮಠದ ಶ್ರೀಸಾಯಿ ಈಶ್ವರ್ ಗುರೂಜಿ ತಿಳಿಸಿದರು.
ಉಡುಪಿ ಕಟಪಾಡಿ ಸಮೀಪದ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಗುರುವಾರ (ಜು.23) ಆಯೋಜಿಸಿದ್ದ 'ಆಟಿದ ಒಣಸ್ ಗುರೂಜಿ ನೊಟ್ಟೊಗು' ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಈಶ್ವರ್ ಟಿವಿ ಮಾಧ್ಯಮದ ಪುನರ್ ಆರಂಭ ಮತ್ತು 'ತ್ರಿಶಕ್ತಿ ಅಭಿಯಾನ' ಉದ್ಘಾಟಿಸಿ ಮಾತನಾಡಿದರು.
ನಗರಸಭಾ ಮಾಜಿ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ದೇಶಾಭಿಮಾನ ಎಲ್ಲಕ್ಕಿಂತ ಮಿಗಿಲಾದದ್ದು. ಹಿಂದೂ ಸಂಸ್ಕೃತಿಗೆ ತೊಂದರೆಯಾದಾಗ ನಾವೆಲ್ಲರೂ ಎದ್ದು ನಿಲ್ಲಬೇಕಾದ ಅಗತ್ಯತೆ ಇದೆ ಎಂದರು.
ಗೋರಕ್ಷಾ ಅಭಿಯಾನದ ಜಿಲ್ಲಾ ಸಂಚಾಲಕ ಗಜೇಂದ್ರ ಎಸ್.ಬಿ. ಬೈಂದೂರು, ನಾಗರಾಜ್, ವಿಜಯ್ ಕುಂದರ್, ರಾಮ ಟಿ. ಪೂಜಾರಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ ಉಪಸ್ಥಿತರಿದ್ದರು.
ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.