ಶ್ರೀನಿವಾಸ ಕಲ್ಯಾಣೋತ್ಸವ ವೆಬ್‌ಸೈಟ್ ಲೋಕಾರ್ಪಣೆ

 ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮಾಹಿತಿಗಳನ್ನೊಳಗೊಂಡಿರುವ ವೆಬ್‌ಸೈಟ್ ಅನ್ನು ಕೆ.ಕೃಷ್ಣಮೋಹನ್ ಪೈ ಹಾಗೂ ಕೆ.ಸತ್ಯೇಂದ್ರ ಪೈ ಲೋಕಾರ್ಪಣೆಗೊಳಿಸಿದರು. ಪ್ರಮುಖರಾದ ಮಹೇಶ್ ಅಂಚನ್, ಪ್ರೇಮ್ ಕುಮಾರ್, ಗೀತಾಂಜಲಿ ಸುವರ್ಣ, ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ ಇದ್ದರು.
ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮಾಹಿತಿಗಳನ್ನೊಳಗೊಂಡಿರುವ ವೆಬ್‌ಸೈಟ್ ಅನ್ನು ಕೆ.ಕೃಷ್ಣಮೋಹನ್ ಪೈ ಹಾಗೂ ಕೆ.ಸತ್ಯೇಂದ್ರ ಪೈ ಲೋಕಾರ್ಪಣೆಗೊಳಿಸಿದರು. ಪ್ರಮುಖರಾದ ಮಹೇಶ್ ಅಂಚನ್, ಪ್ರೇಮ್ ಕುಮಾರ್, ಗೀತಾಂಜಲಿ ಸುವರ್ಣ, ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ ಇದ್ದರು.
Published on
ಪಡುಬಿದ್ರಿ: ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ.ಕೃಷ್ಣಮೋಹನ್ ಪೈ ಯುಎಸ್‌ಎ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ ದೈವಸ್ಥಾನಗಳ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಎಸ್‌ವಿಎಸ್ ಶಾಲಾ ಕ್ರೀಡಾಂಗಣದಲ್ಲಿ ಏ.11ರಂದು ಸಂಪನ್ನಗೊಳ್ಳಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮಾಹಿತಿಗಳನ್ನೊಳಗೊಂಡಿರುವ ವೆಬ್‌ಸೈಟ್ ಅನ್ನು ಸೇವಾಕರ್ತರಾದ ಕೆ.ಕೃಷ್ಣಮೋಹನ್ ಪೈ ಹಾಗೂ ಕೆ.ಸತ್ಯೇಂದ್ರ ಪೈ ಲೋಕಾರ್ಪಣೆಗೊಳಿಸಿದರು.
ನಮ್ಮೂರಿನಲ್ಲೇ ನಡೆಯುವ ತಿರುಪತಿ ಶ್ರೀ ವೆಂಕಟರಮಣ ದೇವರ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವೆಬ್‌ಸೈಟ್ ಅಭಿವೃಪಡಿಸಲಾಗಿದ್ದು ಕಾರ್ಯಕ್ರಮದ ಸಂಪೂರ್ಣ ವಿವರದೊಂದಿಗೆ ಪಾರ್ಕಿಂಗ್ ವ್ಯವಸ್ಥೆ ಸಹಿತ ಎಲ್ಲ ಮಾಹಿತಿ ಲಭ್ಯವಿದೆ ಎಂದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ವಿದ್ಯಾವರ್ಧಕ ಸಂಘದ ಸದಸ್ಯರಾದ ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ, ವೆಂಕಟರಮಣ ಭಟ್, ಕೃಷ್ಣಾನಂದ ಕಾಮತ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ ಪ್ರಮುಖರಾದ ಕಾರ್ತಿಕ್ ಪಾಲನ್, ಗಣೇಶ್ ಕುಮಾರ್ ಉದ್ಯಾವರ, ಕಿಶೋರ್ ಅಂಬಾಡಿ, ಯೋಗೀಶ್ ದುಗ್ಗುಪ್ಪಾಡಿ, ರಾಜೇಶ್ ಶ್ರೀಯಾನ್, ನಾಗೇಶ್ ಕಾಮತ್, ಶಂಕರ್ ಸಾಲ್ಯಾನ್, ಶ್ರೀನಿವಾಸ ಶೆಣೈ, ಯಶವಂತ್ ದೇವಾಡಿಗ, ಉಮೇಶ್ ಕಾಮತ್, ದಿನಕರ ಪೈ, ಭಾರತಿ ಪೈ, ಅಶ್ವಿನಿ ಅಂಚನ್, ಹರಿಶ್ಚಂದ್ರ ಪೈ, ಪ್ರಶಾಂತ್ ಆರ್.ಎಸ್., ಜಗದೀಶ್ ಕಾಮತ್ ಉಪಸ್ಥಿತರಿದ್ದರು. ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net