ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿದ್ವಾನ್ ಉಪೇಂದ್ರ ಮಲ್ಯ ಬಳಗದ ನೃತ್ಯ ರೂಪಕವನ್ನು ಗುಜ್ಜಾಡಿ ಪ್ರಭಾಕರ್ ನಾಯಕ್ ಉದ್ಘಾಟಿಸಿದರು. ಸತೀಶ್ ಕಿಣಿ, ವಿದ್ವಾನ್ ಹರಿಪ್ರಸಾದ್ ಶರ್ಮ, ಪೂರ್ಣಿಮಾ ರಾವ್, ರಾಧಿಕಾ ಭಟ್, ಚೇಂಪಿ ರಾಮಚಂದ್ರ ಭಟ್ ಇತರರಿದ್ದರು.
Published on:
Copied
Follow Us
* ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ ಅಭಿಪ್ರಾಯ
* ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ಉದ್ಘಾಟನೆ
ಉಡುಪಿ: ಕೊಂಕಣಿ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಜಿಎಸ್ಬಿ ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಮ್ಮೆಲ್ಲರ ಇಷ್ಟದ ದೇವರಾದ ಶ್ರೀನಿವಾಸನ ಕಲ್ಯಾಣ ಮಹೋತ್ಸವವನ್ನು ನೃತ್ಯ ರೂಪಕದಲ್ಲಿ ನೋಡುವ ಸೌಭಾಗ್ಯ ಲಭಿಸಿದೆ. ಉಡುಪಿ ಜಿಲ್ಲೆಯಲ್ಲಿಯೇ ಇದು ಪ್ರಥಮ ಪ್ರಯೋಗ. ಪೌರಾಣಿಕ ಕಥೆಯ ಈ ನೃತ್ಯರೂಪಕ ಸಮಾಜದ ಎಲ್ಲ ದೇಗುಲಗಳಲ್ಲೂ ನಡೆಯಬೇಕು. ಇಂತಹ ಕಾರ್ಯಕ್ರಮದಿಂದ ಯುವಪೀಳಿಗೆಯಲ್ಲಿ ದೇವರ ಬಗ್ಗೆ ಜ್ಞಾನ, ಭಕ್ತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ ಅಭಿಪ್ರಾಯಪಟ್ಟರು.
ಉಡುಪಿಯ ತೆಂಕಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಕಮಲಾನಾಥ ಮಂಟಪದಲ್ಲಿ ಉಡುಪಿಯ ಆಭರಣ ಜುವೆಲರ್ಸ್ ಪ್ರಾಯೋಜಕತ್ವದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ಉಡುಪಿ ವತಿಯಿಂದ ಶನಿವಾರ (ಜೂ.6) ಆಯೋಜಿಸಿದ್ದ ಕೊಂಕಣಿ ಭರತನಾಟ್ಯ ನೃತ್ಯ ರೂಪಕ 'ಶ್ರೀನಿವಾಸ ಕಲ್ಯಾಣ' ಸಾಂಸ್ಕೃಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಕುಲಮ್ ನೃತ್ಯ ನಾದ ಕಲಾಕೇಂದ್ರ ಮಂಗಳೂರಿನ ವಿದ್ವಾನ್ ಉಪೇಂದ್ರ ಮಲ್ಯ ಮತ್ತು ಬಳಗದವರು ನೃತ್ಯ ರೂಪಕ ಪ್ರದರ್ಶಿಸಿದರು. ದೇವಳದ ವತಿಯಿಂದ ಎಲ್ಲ ಕಲಾವಿದರನ್ನು ಗೌರವಿಸಲಾಯಿತು.
ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಕಿಣಿ, ವಿದ್ವಾನ್ ಹರಿಪ್ರಸಾದ್ ಶರ್ಮ, ಮಹಿಳಾ ಮಂಡಳಿಯ ಪೂರ್ಣಿಮಾ ರಾವ್, ರಾಧಿಕಾ ಭಟ್ ಉಪಸ್ಥಿತರಿದ್ದರು. ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.