ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ.
Published on:
Copied
Follow Us
* ಸರ್ಕಾರಕ್ಕೆ ಶ್ರೀನಿವಾಸ್ ರಾವ್ ಕೆ. ಒತ್ತಾಯ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವುದಾಗಿ ಬಜೆಟ್ನಲ್ಲಿ ಘೋಷಿಸಿದ್ದು, ಸರ್ಕಾರದ ಈ ತೀರ್ಮಾನ ಸ್ವಾಗತಾರ್ಹ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ತಿಳಿಸಿದ್ದಾರೆ.
ನಿಷೇಧದ ವಯಸ್ಸನ್ನು 16ರ ಬದಲಾಗಿ 18 ವರ್ಷದೊಳಗಿನ ಮಕ್ಕಳಿಗೆ ವಿಸ್ತರಿಸಬೇಕಿದೆ. 16ರಿಂದ 18ರ ವಯಸ್ಸಿನ ಮಧ್ಯದಲ್ಲಿಯೇ ಯುವಕ-ಯುವತಿಯರು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದಾರಿ ತತಪ್ಪುತ್ತಿದ್ದಾರೆ. ಬಹುತೇಕರು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ.
ಅಪರಾಧಿಕ ಪ್ರಕರಣಗಳೂ ಸಹ ಈ ವಯಸ್ಸಿನಲ್ಲಿಯೇ ಹೆಚ್ಚುತ್ತಿದೆ. ಜಾಲತಾಣಗಳ ಮೂಲಕ ಪ್ರೀತಿ-ಪ್ರೇಮದ ನಿವೇದನೆ ಮಾಡುತ್ತ ಆತ್ಮಹತ್ಯೆ ಮಾಡಿಕೊಳ್ಳುವುದೂ ನಡೆದಿದೆ. ಹೀಗಾಗಿ 18 ವರ್ಷದ ಒಳಗಿನವರಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಸರ್ಕಾರ ನಿಷೇಧಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.