ಸನಾತನ ಧರ್ಮದ ಉಳಿವಿಗೆ ಶ್ರಮ

ಶ್ರೀ ಶಂಕರ ಜಯಂತಿ ಮಹೋತ್ಸವದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಸ್ಕೃತ ಅಧ್ಯಾಪಕ ಡಾ.ರಾಘವೇಂದ್ರ ರಾವ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ.ವೈ ರವೀಂದ್ರ ನಾಥ್ ರಾವ್, ಆರೂರು ಶ್ರೀನಿವಾಸ ಭಟ್, ರವೀಂದ್ರ ಹೆಬ್ಬಾರ್, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಶಂಕರ ಜಯಂತಿ ಮಹೋತ್ಸವದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಸ್ಕೃತ ಅಧ್ಯಾಪಕ ಡಾ.ರಾಘವೇಂದ್ರ ರಾವ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ.ವೈ ರವೀಂದ್ರ ನಾಥ್ ರಾವ್, ಆರೂರು ಶ್ರೀನಿವಾಸ ಭಟ್, ರವೀಂದ್ರ ಹೆಬ್ಬಾರ್, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಂಕರ ಜಯಂತಿ ಮಹೋತ್ಸವ
  • ಉಡುಪಿ ಜಿಲ್ಲಾ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಸಹಕಾರ
  • ಡಾ.ರಾಘವೇಂದ್ರ ರಾವ್ ಅವರಿಗೆ ಸನ್ಮಾನ
ಬ್ರಹ್ಮಾವರ: ಸನಾತನ ಧರ್ಮ ಹಲವು ಪಂಥ ಪಂಗಡಗಳಿಂದ ಛಿದ್ರವಾಗಿ ಹರಿದು ಹಂಚಿ ಹೋಗುತ್ತಿರುವ ಸಮಯ ಮತ್ತು ವಿದೇಶಿಯರು ಭಾರತದ ಮೇಲೆ ಮಾಡುತ್ತಿರುವ ನಾನಾ ಆಕ್ರಮಣ ಕಾಲದಲ್ಲಿ ಸನಾತನ ಧರ್ಮದ ಉಳಿವಿಗೆ ಅವತಾರ ಪುರುಷರಾಗಿ ಜನ್ಮತಾಳಿ ಸನಾತನತೆಯನ್ನು ಏಕ ಸೂತ್ರದಲ್ಲಿ ಒಂದಾಗಿಸಿದ ಕಾರಣ ಶಂಕರಾಚಾರ್ಯರು ಇಂದಿಗೂ ಪ್ರಾಥಃಸ್ಮರಣಿಯರಾಗಿದ್ದಾರೆ ಎಂದು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಸ್ಕೃತ ಅಧ್ಯಾಪಕ ಡಾ.ರಾಘವೇಂದ್ರ ರಾವ್ ಹೇಳಿದರು.
ಬ್ರಹ್ಮಾವರ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಾಹ್ಮಣ ವಲಯ ಸಮಿತಿ ಬ್ರಹ್ಮಾವರ ವತಿಯಿಂದ ಉಡುಪಿ ಜಿಲ್ಲಾ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಸಹಕಾರದೊಂದಿಗೆ ಶುಕ್ರವಾರ ಶ್ರೀ ಶಂಕರ ಜಯಂತಿ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಿತಿಯ ಡಾ.ವೈ ರವೀಂದ್ರ ನಾಥ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಆರೂರು ಶ್ರೀನಿವಾಸ ಭಟ್, ರವೀಂದ್ರ ಹೆಬ್ಬಾರ್, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಕೃಷ್ಣಮೂರ್ತಿ ರಾವ್ ಸ್ವಾಗತಿಸಿದರು. ಆರ್.ಟಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕಲ್ಕೂರ ವಂದಿಸಿದರು. ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net