ಕೃಷ್ಣನ ಭಕ್ತರಿಗೆ ಮೂಡೆ ಹಾಲು ವಿತರಣೆ

ಉಡುಪಿಯಲ್ಲಿ ಕೃಷ್ಣನ ಭಕ್ತರಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಮೂಡೆ ಹಾಲು ವಿತರಿಸಿದರು. ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸತೀಶ್​ ದೇವಾಡಿಗ, ರೇಶ್ಮಾ ಸಂತೋಷ್​ ಹೆಗ್ಡೆ, ವಾರಿಜಾ ಕಲ್ಮಾಡಿ ಇತರರಿದ್ದರು.
ಉಡುಪಿಯಲ್ಲಿ ಕೃಷ್ಣನ ಭಕ್ತರಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಮೂಡೆ ಹಾಲು ವಿತರಿಸಿದರು. ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸತೀಶ್​ ದೇವಾಡಿಗ, ರೇಶ್ಮಾ ಸಂತೋಷ್​ ಹೆಗ್ಡೆ, ವಾರಿಜಾ ಕಲ್ಮಾಡಿ ಇತರರಿದ್ದರು.
Published on

* ಜನ್ಮಾಷ್ಟಮಿಗೆ ಶ್ರೀ ಕ್ಷೇತ್ರ ಶಂಕರಪುರದ ಸೇವೆ 

ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಜನ್ಮಾಷ್ಟಮಿ ನಿಮಿತ್ತ ಉಡುಪಿ ತಾಲೂಕು ಕಚೇರಿ ಸಮೀಪದ ಶಾಶಕ ಯಶ್​ಪಾಲ್​ ಸುವರ್ಣ ಅವರ ಕಚೇರಿಯ ಬಳಿ ಶನಿವಾರ (ಸೆ.9) ಮೂಡೆ ಹಾಲು ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಶಂಕರಪುರದ ಪೀಠಾಧೀಶ ಶ್ರೀ ಸಾಯಿ ಈಶ್ವರ ಗುರೂಜಿ ಮಾತನಾಡಿ, ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಯ ದಿನ ದೇಶ&ವಿದೇಶದಿಂದ ಸಾವಿರಾರು ಭಕ್ತರು ಉಡುಪಿಗೆ ಬರುತ್ತಾರೆ. ಅವರಿಗೆ ಶ್ರೀಕೃಷ್ಣಿಗೆ ಪ್ರಿಯವಾಗಿದ್ದ ಮೂಡೆ ಹಾಲು ಮತ್ತು ಅನ್ನಪ್ರಸಾದ ನೀಡುವ ಮೂಲಕ ನಾವೂ ಸಹ ಅಷ್ಟಮಿ ಹಬ್ಬ ಆಚರಿಸುತ್ತಿದ್ದೇವೆ. ಉಡುಪಿ ಎಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಶ್ರೀಕೃಷ್ಣ. ಹೀಗಾಗಿ ಇಲ್ಲಿನ ಪರ್ಯಾಯ ಮತ್ತು ಆತನ ಜನ್ಮಾಷ್ಟಮಿಯು ಅತ್ಯಂತ ಪ್ರಸಿದ್ಧವಾಗಿದೆ ಎಂದರು.
ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ ಮಾತನಾಡಿ, ಶ್ರೀ ಕ್ಷೇತ್ರ ಶಂಕರಪುರದಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅನೇಕ ರೀತಿಯ ಸಾಮಾಜಿಕ ಚಟುವಟಿಕೆಯನ್ನು ನಿತ್ಯ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ವೀಣಾ ಶೆಟ್ಟಿ, ಸತೀಶ್​ ದೇವಾಡಿಗ, ರೇಶ್ಮಾ ಸಂತೋಷ್​ ಹೆಗ್ಡೆ, ವಾರಿಜಾ ಕಲ್ಮಾಡಿ, ನಗರಸಭಾ ಮಾಜಿ ಸದಸ್ಯ ವಿಜಯ್​ ಕೊಡವೂರು, ಗಜೇಂದ್ರ ಬೈಂದೂರು, ನಾಗರಾಜ್​, ಶ್ರೀಧರ್​ ಅಮೀನ್​, ರಾಜೇಶ್​ ಇನ್ನಂಜೆ, ಶಿಲ್ಪಾ ಮಹೇಶ್​ ಜತ್ತನ್​, ಸಂತೋಷ್​ ಕಕ್ಕುಂಜೆ, ಕ್ಷೇತ್ರದ ಭಕ್ತರು, ಗುರೂಜಿ ಶಿಷ್ಯರು ಉಪಸ್ಥಿತರಿದ್ದರು.ರಾಫವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net