ಶಿಬಿರದಲ್ಲಿ ಹಬ್ಬ ಹರಿದಿನಗಳು ಎನ್ನುವ ವಿಚಾರದಲ್ಲಿ ಯುಗಾದಿ, ನಾಗರ ಪಂಚಮಿ, ಚೌತಿ, ಶ್ರೀ ಕೃಫ್ಣಿ ಜನ್ಮಾಷ್ಟಮಿ, ನವರಾತ್ರಿ, ನರಸಿಂಹ ಜಯಂತಿ, ತುಳಸೀ ಪೂಜೆ, ದೀಪಾವಳಿ, ಗೋಪೂಜೆ ಸಹಿತ ಕಾರ್ತಿಕ ಮಾಸ, ಗೀತಾ ಜಯಂತಿ, ಏಕಾದಶಿ ಮುಂತಾದ ಪರ್ವ ದಿನಗಳ ಕುರಿತಂತೆ ವಿದ್ವಾಂಸರಿಂದ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ 5ರ ವರೆಗೆ ಮಹಾ ಮಹೋಪಾಧ್ಯಾಯ, ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯ, ಸಗ್ರಿ ಆನಂದ ತೀರ್ಥ ಉಪಾಧ್ಯಾಯ, ಷಣ್ಮುಖ ಹೆಬ್ಬಾರ್, ಡಾ. ಸುನೀಲ್ ಆಚಾರ್ಯ, ಸುಧೀಂದ್ರ ಆಚಾರ್ಯ ಇತರರ ಹಬ್ಬಗಳ ಆಚರಣೆ ಹಾಗೂ ವಿಧಿ-ವಿಧಾನಗಳ ಬಗ್ಗೆ ತಿಳಿಸಲಿದ್ದಾರೆ.'ಸಾಧಕ-ಸಂವಾದ' ಎಂಬ ಇನ್ನೊಂದು ಅವಧಿ ಸಂಜೆ 5ರಿಂದ 5:45ರ ವರೆಗೆ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಪ್ರಶ್ನೋತ್ತರ ಹಮ್ಮಿಕೊಳ್ಳಲಾಗಿದೆ. ಡಾ. ಶ್ರುತಿ ಬಲ್ಲಾಳ್, ಡಾ. ಎಂ.ಮೋಹನ ಆಳ್ವ, ಡಾ. ರಾಮಕೃಷ್ಣ ಆಚಾರ್, ಡಾ.ಬಿ. ಗೋಪಾಲ್ ಆಚಾರ್ಯ, ಡಾ ವಿಜಯೇಂದ್ರ ವಸಂತ್, ಡಾ. ಸುಧೀರ್ ರಾಜ್, ವಾದಿರಾಜ, ರತ್ನಾಕರ್ ಇಂದ್ರಾಳಿ ಇತರರು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.