ಎಲ್ಲರನ್ನೂ ಒಗ್ಗೂಡಿಸಲು ಕ್ರೀಡಾಕೂಟ ಪೂರಕ

ಪಾದೂರಿನಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ರತ್ನಾಕರ ಹೆಗ್ಡೆ, ಶಿಲ್ಪಾ ಸುವರ್ಣ, ಕಿಶೋರ್ ಮತ್ತಿತರರಿದ್ದರು.
ಪಾದೂರಿನಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ರತ್ನಾಕರ ಹೆಗ್ಡೆ, ಶಿಲ್ಪಾ ಸುವರ್ಣ, ಕಿಶೋರ್ ಮತ್ತಿತರರಿದ್ದರು.
Published on
ಪಡುಬಿದ್ರಿ: ವೈಮನಸ್ಸು, ವೈರುಧ್ಯ, ಜಾತಿ, ಮತ, ಧರ್ಮಗಳನ್ನು ಮರೆತು ಎಲ್ಲರನ್ನೂ ಒಂದುಗೂಡಿಸುವ ನಿಟ್ಟಿನಲ್ಲಿ ಪಾದೂರು ಗ್ರಾಮೋತ್ಸವ ಕೆಸರುಗದ್ದೆ ಕ್ರೀಡಾಕೂಟ ಪೂರಕವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಜೂರು, ಪಾದೂರು, ಹೇರೂರು, ಕಳತ್ತೂರು ನಾಲ್ಕು ಗ್ರಾಮಗಳ ಸಾರ್ವಜನಿಕರಿಗಾಗಿ ಪಾದೂರು ಹೊಸಮನೆ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಪಾದೂರು ಗ್ರಾಮೋತ್ಸವ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾತನಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಮಾಧವ ಶೆಟ್ಟಿ ಹೊಸಮನೆ ಮತ್ತು ಹರೀಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಮಾಜಿ ಸದಸ್ಯೆ ಶಿಲ್ಪಾ ಜಿ.ಸುವರ್ಣ, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಉಮೇಶ್ ಕರ್ಕೇರ, ಕಳತ್ತೂರು ಶ್ರೀ ಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಕೃಷ್ಣ ಆಳ್ವ, ಚಂದ್ರನಗರ ಶ್ರೀ ರಾಮ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಗುರ್ಮೆ, ರೋಟರಿ ಸಮುದಾಯದಳದ ಅಧ್ಯಕ್ಷ ಪ್ರಸನ್ನ ಆಚಾರ್ಯ, ಪ್ರಮುಖರಾದ ಅರುಣ್ ಶೆಟ್ಟಿ ಪಂಜಿತ್ತೂರುಗುತ್ತು, ಸದಾನಂದ ಶೆಟ್ಟಿ ಹೊಸಮನೆ, ಪ್ರಸಾದ್ ಶೆಟ್ಟಿ ವಳದೂರು, ಮಂಜುಳಾ ಆಚಾರ್ಯ, ಸಹನಾ ತಂತ್ರಿ, ಸಂದೀಪ್ ರಾವ್, ರೋಹಿತ್ ರಾವ್ ಗುರ್ಮೆ, ಕರುಣಾಕರ ಶೆಟ್ಟಿ, ಅನಿಲ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಪಾದೂರು ಗ್ರಾಮೋತ್ಸವ ಸಮಿತಿ ಮತ್ತು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ಆಶಾ ಆಚಾರ್ಯ ವಂದಿಸಿದರು. ರವಿ ಆಚಾರ್ಯ, ಸುಜಿತ್ ಶೆಟ್ಟಿ, ಶ್ರೀನಿವಾಸ ಐತಾಳ್ , ರಮಾಕಾಂತ ಐತಾಳ್, ವಿಶ್ವನಾಥ ಕುರ್ಕಾಲು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net