ಯಜ್ಞ, ಯಾಗದಿಂದ ಆಧ್ಯಾತ್ಮಿಕ ಶಕ್ತಿ ಉಳಿವು

ಉಪ್ಪುಂದ ವಾದಯ್ಯ ಶೆಟ್ರಮನೆ ಸಪರಿವಾರ ಶ್ರೀ ಉವಾಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ರಥೋತ್ಸವದ ಪ್ರಯುಕ್ತ ಶನಿವಾರ ಧಾರವಾಡದ ಶ್ರೀಕ್ಷೇತ್ರ ಹೆಬ್ಬಳ್ಳಿ ಶ್ರೀಬ್ರಹ್ಮಚೈತನ್ಯ ಸ್ಥಿರಪಾದುಕಾಶ್ರಮದ ಸದ್ಗುರು ಶ್ರೀ ದತ್ತಾವದೂತ ಮಹಾರಾಜ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಿತು. ಯು.ಸೀತಾರಾಮ ಶೆಟ್ಟಿ ಮತ್ತು ಸಹೋದರರು ಇದ್ದರು.
ಉಪ್ಪುಂದ ವಾದಯ್ಯ ಶೆಟ್ರಮನೆ ಸಪರಿವಾರ ಶ್ರೀ ಉವಾಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ರಥೋತ್ಸವದ ಪ್ರಯುಕ್ತ ಶನಿವಾರ ಧಾರವಾಡದ ಶ್ರೀಕ್ಷೇತ್ರ ಹೆಬ್ಬಳ್ಳಿ ಶ್ರೀಬ್ರಹ್ಮಚೈತನ್ಯ ಸ್ಥಿರಪಾದುಕಾಶ್ರಮದ ಸದ್ಗುರು ಶ್ರೀ ದತ್ತಾವದೂತ ಮಹಾರಾಜ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಿತು. ಯು.ಸೀತಾರಾಮ ಶೆಟ್ಟಿ ಮತ್ತು ಸಹೋದರರು ಇದ್ದರು.
Published on
ಬೈಂದೂರು: ಭಾರತೀಯ ಸನಾತನ ವೈದಿಕ ಸಂಸ್ಕೃತಿ ಅತ್ಯಂತ ಪ್ರಾಚೀನವಾಗಿದ್ದು, ಉಪನಿಷತ್, ಶಾಸ್ತ್ರ, ವೇದಗಳು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭಗಳು. ನಮ್ಮ ದೇಶದ ಮೇಲೆ ಅದೆಷ್ಟೋ ಬಾರಿ ವಿದೇಶಿಯರ ಆಕ್ರಮಣವಾದರೂ ನಮ್ಮ ಸಂಸ್ಕೃತಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಹವನ, ಯಜ್ಞ, ಯಾಗಾದಿ ಮೂಲಕ ಇಂದಿಗೂ ಆಧ್ಯಾತ್ಮಿಕ ಶಕ್ತಿ ಉಳಿದಿದೆ ಎಂದು ಧಾರವಾಡದ ಶ್ರೀ ಕ್ಷೇತ್ರ ಹೆಬ್ಬಳ್ಳಿ ಶ್ರೀ ಬ್ರಹ್ಮಚೈತನ್ಯ ಸ್ಥಿರಪಾದುಕಾಶ್ರಮದ ಸದ್ಗುರು ಶ್ರೀ ದತ್ತಾವದೂತ ಮಹಾರಾಜ್ ಹೇಳಿದರು.
ಉಪ್ಪುಂದ ವಾದಯ್ಯ ಶೆಟ್ರಮನೆ ಸಪರಿವಾರ ಶ್ರೀ ಉವಾಮಹೇಶ್ವರ ದೇವಸ್ಥಾನದ ವಾರ್ಷಿಕ ವರ್ಧಂತಿ, ಅತಿರುದ್ರ ಅನುಷ್ಠಾನಯಾಗ, ಬ್ರಹ್ಮಕಲಶಾಭಿಷೇಕ ಹಾಗೂ ಶಿವರಾತ್ರಿಯ ರಥೋತ್ಸವದ ಪ್ರಯುಕ್ತ ಶನಿವಾರ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀಮತಿ ಸಿದ್ದಮ್ಮ ವಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೆಬಲ್ ಟ್ರಸ್ಟ್‌ನ ಪ್ರವರ್ತಕ ಯು.ಸೀತಾರಾಮ ಶೆಟ್ಟಿ ದಂಪತಿ ಗುರುಗಳ ಪಾದಪೂಜೆ ನೆರವೇರಿಸಿದರು. ಗುರುಗಳು ಸಾರ್ವಜನಿಕರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ವಾದಯ್ಯ ಶೆಟ್ರಮನೆ ಕುಟುಂಬಸ್ಥರು ಉಪಸ್ಥಿತರಿದ್ದರು. ಯು.ಸಂದೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಕೇಂದ್ರೀಕರಿಸಿ ಅಂತರ್ಮುಖಿಯಾದಾಗ ವಾತ್ರ ಜೀವನದಲ್ಲಿ ಶಾಂತಿ, ಸವಾಧಾನ, ನೆಮ್ಮದಿ ಪ್ರಾಪ್ತವಾಗಲು ಸಾಧ್ಯವಿದೆ. ಇವುಗಳನ್ನೆಲ್ಲ ಬಹಿರ್ಮುಖವಾಗಿ ಹುಡುಕಿಕೊಂಡು ಹೋದರೆ ಅದೆಂದೂ ನಮಗೆ ಧಕ್ಕದು. ಹಿರಿಯರು ಮಕ್ಕಳನ್ನು ಅಧ್ಯಾತ್ಮದ ಲೋಕಕ್ಕೆ ಪರಿಚಯಿಸಿ ದೇವರ ನಾಮಸ್ಮರಣೆಯ ವ್ಯಸನ ಹೆಚ್ಚಿಸಬೇಕು. ನಿರ್ಗುಣ, ನಿರಾಕಾರನಾದ ಭಗವಂತನ ನಾಮಸ್ಮರಣೆಯಿಂದ ಅಂತರಂಗ ಹಾಗೂ ಬಹಿರಂಗಗಳ ಸರ್ವ ದೋಷಗಳನ್ನು ಹೊರಹಾಕಲು ಸಾಧ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net