ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳ ಅತಿ ವೇಗ ಬಗ್ಗೆ ಮೊದಲ ವಾರದಲ್ಲಿ 40,175 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ ಈ ಸಂಖ್ಯೆ 14,364ಕ್ಕೆ ಇಳಿಕೆಯಾಗಿದೆ. ಸೀಟ್ ಬೆಲ್ಟ್ ಧರಿಸದಿರುವ ಬಗ್ಗೆ ಆರಂಭದಲ್ಲಿ 15,575 ಪ್ರಕರಣಗಳು ಕಂಡುಬಂದಿದ್ದು, ಪ್ರಸ್ತುತ 6,561ಕ್ಕೆ ಇಳಿದಿದೆ. ಹೆಲ್ಮೆಟ್ ರಹಿತ ಚಾಲನೆ ಬಗ್ಗೆ ಮೊದಲ ವಾರದಲ್ಲಿ 12,440 ಹೆಲ್ಮೆಟ್ ರಹಿತ ಚಾಲನೆ ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ 5,070 ಕ್ಕೆ ಇಳಿದಿದೆ. ರಾಂಗ ಸೈಡ್ ಡೆವಿಂಗ್ ಬಗ್ಗೆ ಆರಂಭದಲ್ಲಿ 4,050ರಷ್ಟಿದ್ದ ಪ್ರಕರಣಗಳು ಪ್ರಸ್ತುತ 2,441ಕ್ಕೆ ಇಳಿಕೆಯಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮೂವರು ಸಂಚರಿಸುವ ಪ್ರಕರಣಗಳು ಮೊದಲ ವಾರದಲ್ಲಿ 3,174 ಇದ್ದದ್ದು, ಇತ್ತೀಚಿನ ವಾರದಲ್ಲಿ 1,036 ಕ್ಕೆ ಇಳಿದಿದೆ. ಭಾರಿ ವಾಹನಗಳ ಅತಿ ವೇಗದ ಚಾಲನೆಗೆ ಸಂಬಂಧಿಸಿದಂತೆ 3,170 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ ಕೇವಲ 997ಕ್ಕೆ ಇಳಿದಿದೆ.