ದೃಷ್ಟಿದೋಷ ನಿವಾರಣೆಗೆ ವಿಶೇಷ ಯೋಜನೆ

  ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಫರೀದ್ ವಿತರಿಸಿದರು. ಪ್ರಮುಖರಾದ ದೇವದಾಸ್ ಭಂಡಾರಿ, ರಮೇಶ್ ಶೆಟ್ಟಿ ಬೋಳಿಯಾರ್, ಮಮತಾ ಗಟ್ಟಿ ಮೊದಲಾದವರಿದ್ದರು.
ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಫರೀದ್ ವಿತರಿಸಿದರು. ಪ್ರಮುಖರಾದ ದೇವದಾಸ್ ಭಂಡಾರಿ, ರಮೇಶ್ ಶೆಟ್ಟಿ ಬೋಳಿಯಾರ್, ಮಮತಾ ಗಟ್ಟಿ ಮೊದಲಾದವರಿದ್ದರು.
Published on

ಉಳ್ಳಾಲ: ಯಾರೂ ಕಣ್ಣಿನ ಸಮಸ್ಯೆಯಿಂದ ಬಳಲಬಾರದು ಎನ್ನುವುದು ನಮ್ಮ ಆಶಯ. ಆ ನಿಟ್ಟಿನಲ್ಲಿ ದೃಷ್ಟಿ ದೋಷ ನಿವಾರಣೆ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲೇ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಫರೀದ್ ಹೇಳಿದರು.


ಯು.ಟಿ.ಫರೀದ್ ಚಾರಿಟೆಬಲ್ ಫೌಂಡೇಶನ್ ಟ್ರಸ್ಟ್, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಹಾಸ್ಪಿಟಲ್ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಹಾಗೂ ಮುಡಿಪು ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮುಡಿಪು ಉತ್ಸವ ಸಂದರ್ಭ ನಡೆದ ಉಚಿತ ಕಣ್ಣಿನ ಪರೀಕ್ಷೆ ಶಿಬಿರದಲ್ಲಿ ಗುರುತಿಸಿದ ಅರ್ಹ ಫಲಾನುಭವಿಗಳಿಗೆ ಶನಿವಾರ ಉಚಿತ ಕನ್ನಡಕ ವಿತರಿಸಿ ವಾತನಾಡಿದರು.
ಕೃಷಿಕ ಸವಾಜದ ಅಧ್ಯಕ್ಷ ದೇವದಾಸ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬಾಳೆಪುಣಿ ಜನಜೀವನ ಗೌರವಾಧ್ಯಕ್ಷ ರಮೇಶ್ ಶೇಣವ, ಕೃಷಿಕ ಸವಾಜದ ಉಪಾಧ್ಯಕ್ಷ ಶೈಲೇಂದ್ರ ಭರತನಾಯ್ಕ ನಚ್ಚಗುತ್ತು, ಕುರ್ನಾಡು ಗ್ರಾ.ಪಂ. ವಾಜಿ ಅಧ್ಯಕ್ಷ ಗಣೇಶ್ ನಾಯಕ್, ಮುಡಿಪು ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅಜಿತ್ ಪೂಜಾರಿ, ಪ್ರಸಾದ್ ನೇತ್ರಾಲಯದ ಅಬ್ದುಲ್ ಖಾದರ್, ಸಂಪರ್ಕಾಧಿಕಾರಿ ರಾವೇಂದ್ರ ಮೊದಲಾದವರಿದ್ದರು. ಹೈದರ್ ಕೈರಂಗಳ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net