ಪವಿತ್ರ ಮಾನವ ಜೀವದ ರಕ್ಷಣೆ ಎಲ್ಲರ ಹೊಣೆ

ಉಡುಪಿ ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಡೆನಿಸ್​ ಡೆಸಾ ವಿಶೇಷ ಪ್ರಾರ್ಥನೆ ಮಾಡಿದರು.
ಉಡುಪಿ ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಡೆನಿಸ್​ ಡೆಸಾ ವಿಶೇಷ ಪ್ರಾರ್ಥನೆ ಮಾಡಿದರು.
Published on

* ವಂ.ಡೆನಿಸ್​ ಡೆಸಾ ಪ್ರವಚನ

* ಯುದ್ಧದ ಉದ್ವಿಗ್ನತೆ ಶಮನ, ವಿಶ್ವಶಾಂತಿಗಾಗಿ ಪ್ರಾರ್ಥನೆ 

ಉಡುಪಿ: ಮಾನವ ಜೀವ ಪವಿತ್ರವಾಗಿದ್ದು ಅದರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಹತ್ತಾರು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯಿಂದಾಗಿ ಗಲ್ಫ್​ ರಾಷ್ಟ್ರಗಳಲ್ಲಿ ನೆಲೆಸಿರುವ ಸಹೋದರ-ಸಹೋದರಿಯರಿರಲ್ಲಿ ಆತಂಕ ಮನೆ ಮಾಡಿದೆ. ಹಿಂಸೆ ಯಾವುದಕ್ಕೂ ಸನ್ಮಾರ್ಗವಲ್ಲ. ಪ್ರೀತಿಯ ಸಂವಾದದ ಮೂಲಕ ಪ್ರಪಂಚದಲ್ಲಿ ಸಮಾಧಾನ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಗತ್ತಿನ ನಾಯಕರು ಕಾರ್ಯಪ್ರವೃತ್ತರಾಗಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್​ ಡೆಸಾ ಆಶಿಸಿದರು.
ಇರಾನ್​ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಇತ್ತೀಚೆಗಿನ ಯುದ್ಧದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪ್​ರ ಮಂಡಳಿ ಸೂಚಿಸಿದಂತೆ ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್​ಗಳಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದ್ದು, ತೊಟ್ಟಂ ಚರ್ಚ್​ನಲ್ಲಿ ಅವರು ಪ್ರವಚನ ನೀಡಿದರು.

ದೇವರು ಬೆಳಕಾಗಲಿ

ಯುದ್ಧದಿಂದಾಗಿ ಅಮಾಯಕರು ಪ್ರಾಣ ಅರ್ಪಿಸಬೇಕಾಗಿದೆ. ಅದರಿಂದಾಗಿ ಅವರ ಕುಟುಂಬವರ್ಗಕ್ಕೆ ಮರೆಯಲಾಗದ ನೋವುಂಟಾಗುತ್ತದೆ. ಯುದ್ಧಪಿಡಿತ ಪ್ರದೇಶದಲ್ಲಿ ಸ್ಫೋಟಕಗಳಿಂದಾಗಿ ಪರಿಸರದ ನಾಶಕ್ಕೂ ಕಾರಣವಾಗುತ್ತದೆ. ಹೀಗಾಗಿ ಜಗತ್ತಿನ ಮುಖಂಡರಿಗೆ ದೇವರು ಬೆಳಕಾಗಲಿ ಎಂದರು.
ಉಡುಪಿಯ ಶೋಕಮಾತಾ ಚರ್ಚ್​ನಲ್ಲಿ ವಂ.ಚಾರ್ಲ್ಸ್​ ಮಿನೇಜಸ್​, ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ನಲ್ಲಿ ವಂ. ಫರ್ಡಿನಾಂಡ್​ ಗೊನ್ಸಾಲ್ವಿಸ್​, ಕುಂದಾಪುರದ ಹೋಲಿ ರೋಜರಿಯಲ್ಲಿ ವಂ.ಪಾವ್ಲ್​ ರೇಗೊ, ಕಾರ್ಕಳ ಸಂತ ಲಾರೆನ್ಸ್​ ಬಸಿಲಿಕಾದಲ್ಲಿ ವಂ.ಆಲ್ಬನ್​ ಡಿಸೋಜಾ ಸೇರಿದಂತೆ ವಿವಿಧ ಚರ್ಚ್​ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶ್ವಶಾಂತಿಗಾಗಿ ಮಾ.8ರಿಂದ 14ರ ವರೆಗೆ ಶಾಂತಿಗಾಗಿ ವಿಶೇಷ ಪವಿತ್ರ ಜಪಸರ ಪ್ರಾರ್ಥನೆ ಹಾಗೂ ಮಾ.13ರಂದು ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಲು ಕ್ರೈಸ್ತ ಧರ್ಮಸಭೆ ಆಶಿಸಿದೆ.
"

ಪ್ರತಿಯೊಂದು ಬಿಕ್ಕಟ್ಟುಗಳಿಗೆ ಯುದ್ಧವೊಂದೇ ಪರಿಹಾರವಲ್ಲ. ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದು:ಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯ ಮಾಡುತ್ತಿದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಕೆಲಸ ಮಾಡುತ್ತಿರುವ, ವಾಸಿಸುತ್ತಿರುವ ಭಾರತದ ಸಹೋದರ, ಸಹೋದರಿಯರ ಸುರಕ್ಷತೆಯ ಕುರಿತು ಚಿಂತಿಸಬೇಕಾಗಿದೆ. ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇದು ಆಡಳಿತ ವರ್ಗದ ಜವಾಬ್ದಾರಿ. ದೇವರು ವಿಶ್ವದ ನಾಯಕರಿಗೆ ಸನ್ಮತಿ, ಪ್ರೇರಣೆ ನೀಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net