ಮತ್ತೊಮ್ಮೆ ನಾವೆಲ್ಲರೂ ಮಕ್ಕಳಾಗೋಣ

ಉಡುಪಿಯಲ್ಲಿ ಆಯೋಜಿಸಿದ್ದ 'ಕೂತು ಮಾತಾಡುವ' ಕಾರ್ಯಕ್ರಮದಲ್ಲಿ ಜೀವನರಾಂ ಸುಳ್ಯ ಅವರನ್ನು ಸನ್ಮಾನಿಸಲಾಯಿತು. ಯು.ವಿಶ್ವನಾಥ್​ ಶೆಣೈ, ರವಿರಾಜ್​ ಎಚ್​.ಪಿ., ಪ್ರೊ.ಶಂಕರ್​, ಮುರಳಿ ಕಡೆಕಾರ್​, ರಾಜೇಶ್​ ಭಟ್​ ಪಣಿಯಾಡಿ, ಶಿಲ್ಪಾ ಜೋಶಿ, ರಾಘವೇಂದ್ರ ಪ್ರಭು ಕರ್ವಾಲು, ಅವಿನಾಶ್​ ಕಾಮತ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ಕೂತು ಮಾತಾಡುವ' ಕಾರ್ಯಕ್ರಮದಲ್ಲಿ ಜೀವನರಾಂ ಸುಳ್ಯ ಅವರನ್ನು ಸನ್ಮಾನಿಸಲಾಯಿತು. ಯು.ವಿಶ್ವನಾಥ್​ ಶೆಣೈ, ರವಿರಾಜ್​ ಎಚ್​.ಪಿ., ಪ್ರೊ.ಶಂಕರ್​, ಮುರಳಿ ಕಡೆಕಾರ್​, ರಾಜೇಶ್​ ಭಟ್​ ಪಣಿಯಾಡಿ, ಶಿಲ್ಪಾ ಜೋಶಿ, ರಾಘವೇಂದ್ರ ಪ್ರಭು ಕರ್ವಾಲು, ಅವಿನಾಶ್​ ಕಾಮತ್​ ಇದ್ದರು.
Published on

* ರಂಗ ನಿರ್ದೇಶಕ ಜೀವನರಾಂ ಸುಳ್ಯ ಅನಿಸಿಕೆ

* 'ಕೂತು ಮಾತಾಡುವ' ಕಾರ್ಯಕ್ರಮ  

ಉಡುಪಿ: ನಾವು ನಮ್ಮ ಋಣಾತ್ಮಕ ಅಂಶಗಳನ್ನು ಮತ್ತೊಬ್ಬರಿಗೆ ತಿಳಿಸದೆ, ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಪರಿಪಾಠ ಬೆಳೆಯಬೇಕು. ಇದೂ ಸಹ ಜೀವನದ ಪ್ರಮುಖ ಸಾಧನೆಯೇ ಆಗಿದೆ. ಬದುಕಿನ ಸಾರ್ಥಕತೆ ಗಳಿಸಲು ನಾವೆಲ್ಲರೂ ಮತ್ತೊಮ್ಮೆ ಮಕ್ಕಳಾಗಬೇಕು ಎಂದು ಖ್ಯಾತ ರಂಗ ನಿರ್ದೇಶಕ ಜೀವನರಾಂ ಸುಳ್ಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಶಾರದಾ ಮಂಟಪ ರಸ್ತೆಯ ಮಾರ್ಗದಲ್ಲಿರುವ ರಂಗವಲ್ಲಿ ಮನೆಯ ಆವರಣದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಆಯೋಜಿಸಿದ್ದ 'ಕೂತು ಮಾತಾಡುವ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿನ ರೋಚಕ ಕಥೆ, ನಡೆದ ಟನೆ, ಕಷ್ಟದಿಂದ ಮೇಲೆದ್ದು ಸಾಧನೆ ಮಾಡಿದ ರೀತಿಯನ್ನು ವಿಸ್ತಾರವಾಗಿ ತಿಳಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ್​ ಶೆಣೈ, ಅಧ್ಯಕ್ಷ ಪ್ರೊ.ಶಂಕರ್​, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​, ಕಸಾಪ ಉಡುಪಿ ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್​, ಕೋಶಾಧಿಕಾರಿ ರಾಜೇಶ್​ ಭಟ್​ ಪಣಿಯಾಡಿ, ಸಂಧ್ಯಾ ಶೆಣೈ, ಶಿಲ್ಪಾ ಜೋಶಿ, ರಾಘವೇಂದ್ರ ಪ್ರಭು ಕರ್ವಾಲು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇತರರು ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಸ್ವಾಗತಿಸಿದರು.  ಕಾರ್ಯಕ್ರಮದ ಆಯೋಜಕ ಅವಿನಾಶ್​ ಕಾಮತ್​ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net