ಶಾಲಾ ವಾಹನಗಳ ವಿಶೇಷ ತಪಾಸಣೆ 30,800 ರೂ. ದಂಡ ವಸೂಲಿ

ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಯಿತು.
ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಯಿತು.
Published on
ಉಡುಪಿ: ಶಾಲಾ-ಕಾಲೇಜು ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್​ ಇಲಾಖೆ ಜುಲೈ 20ರಿಂದ 27ರವರೆಗೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಿದೆ.
ಕಾರ್ಯಾಚರಣೆ ವೇಳೆ 204 ಬಸ್​ಗಳು, 69 ಮಿನಿ ಬಸ್​ಗಳು, 65 ಆಟೋರಿಕ್ಷಾ ಹಾಗೂ 33 ಕಾರು ಸೇರಿದಂತೆ ವಿವಿಧ ವಾಹನಗಳನ್ನು ತಪಾಸಣೆಗೊಳಪಡಿಸಿ, ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 30,800 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ತಪಾಸಣೆ ವೇಳೆ ನಿಗದಿತ ಮಿತಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ 29 ವಾಹನಗಳು, ಸಮವಸ್ತ್ರ ಧರಿಸದೆ ಚಾಲನೆ ಮಾಡುತ್ತಿದ್ದ 5 ಚಾಲಕರು ಹಾಗೂ 43 ಇತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ.
ಶಾಲೆಗಳಿಗೆ ಭೇಟಿ, ಪರಿಶೀಲನೆ
ಅಭಿಯಾನದ ಭಾಗವಾಗಿ ಪೊಲೀಸರು ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ 295 ಬಸ್​ಗಳು, 69 ಮಿನಿ ಬಸ್​ಗಳು ಹಾಗೂ 34 ಕಾರುಗಳನ್ನು ತಪಾಸಣೆ ನಡೆಸಿದರು. ವಾಹನಗಳ ದಾಖಲಾತಿ, ಸುರಕ್ಷತಾ ಉಪಕರಣಗಳು ಹಾಗೂ ಸರಕಾರದ ಮಾರ್ಗಸೂಚಿಗಳ ಅನುಸರಣೆಯನ್ನು ಪರಿಶೀಲಿಸಲಾಯಿತು. ಇದೇ ವೇಳೆ ಚಾಲಕರು ಮತ್ತು ಕಂಡಕ್ಟರ್​ಗಳಿಗೆ ರಸ್ತೆ ಸುರಕ್ಷತೆ, ಮಕ್ಕಳ ಸುರಕ್ಷಿತ ಸಾರಿಗೆ ಹಾಗೂ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net