ನಾವು ಬದುಕಿನಲ್ಲಿ ಯಶಸ್ವಿಯಾಗಲು ವಿಶೇಷ ಪ್ರಯತ್ನ ಮಾಡಬೇಕು. ಆಗ ದೇವರ ದಯೆ ದೊರೆಯುತ್ತದೆ. ಬದುಕು ಪಾವನವಾಗಿ ಸಾರ್ಥಕವಾಗುತ್ತದೆ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಮುನಿಯಾಲು ಗಾಂಧಿ ಮೈದಾನದ ಪ್ರಾಕೃತಿಕ ಶ್ರೀ ನಾಗ ದೇವರ ಸಾನ್ನಿಧ್ಯದ 25ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ಗುರುವಾರ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮ, ಸನ್ಮಾನ:
ಮುನಿಯಾಲು ಕ್ರೀಡಾ ಮತ್ತು ಸಾಂಸತಿಕ ಸಂದ ಅಧ್ಯಕ್ಷ ಗೋಪಿನಾಥ ಭಟ್, ಜಾರ್ಕಳ ಪ್ರಸಾದ್ ತಂತ್ರಿ ಮತ್ತು ನಾಗರಾಜ ಪುತ್ರಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಹಿರಿಯರಾದ ರಾಜು ಪೂಜಾರಿ, ಸಾಧಕರಾದ ಸೃಜನ್ ಶೆಟ್ಟಿ ಮತ್ತು ಸವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ:
ಮೂಡುಕುಡೂರು ಬೀಡಿನ ವಿಜಯ ಭಂಗ, ಮುನಿಯಾಲು ಶ್ರೀ ಮಹಾಗಣಪತಿ ಸೇವಾ ಸಮಿತಿ ಸಂಸ್ಥಾಪಕ ಪಿ.ಸುಧಾಕರ ಶೆಟ್ಟಿ, ಮುನಿಯಾಲು ಕ್ರೀಡಾ ಮತ್ತು ಸಾಂಸತಿಕ ಸಂದ ಅಧ್ಯಕ್ಷ ಗೋಪಿನಾಥ ಭಟ್, ಮುನಿಯಾಲು ವಾಸುಕಿ ನಾಗರಾಜ ಭಜನಾ ಮಂಡಳಿ ಸ್ಥಾಪಕಾಧ್ಯೆ ಸುಗಂಧಿ ನಾಯ್ಕ್, ಸಮಾಜ ಸೇವಕ, ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮುನಿಯಾಲು ಶಿವಾನಂದ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಆಚಾರ್ಯ ಮುನಿಯಾಲು ನಿರೂಪಿಸಿದರು. ಪ್ರಸಾದ ಶೆಟ್ಟಿ ಮಾತಿಬೆಟ್ಟು ವಂದಿಸಿದರು.
ಗ್ರಾಮೀಣ ಪ್ರದೇಶದ ಹಲವು ಪ್ರತಿಭೆಗಳಿಗೆ ಪ್ರೇರಣೆ ಮತ್ತು ಅವಕಾಶ ನೀಡಿದ ಪುಣ್ಯದ ಮಣ್ಣು ಗಾಂಧಿ ಮೈದಾನ. ಇಲ್ಲಿ ಆಟವಾಡಿ ಕಲಿತ ಹಲವು ಪ್ರತಿಭೆಗಳು ರಾಷ್ಟ್ರೀಯ ಕ್ರೀಡಾತಾರೆಗಳಾಗಿ ಮಿಂಚಿದ್ದಾರೆ. ಹಳ್ಳಿಯ ಇನ್ನಷ್ಟು ಪ್ರತಿಭೆಗಳಿಗೆ ಮುನಿಯಾಲಿನ ಮಣ್ಣು ಪ್ರೇರಣೆಯಾಗಬೇಕು. ಅದಕ್ಕಾಗಿ 5 ಕೋಟಿ ರೂ. ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ಕನಸು ಇದೆ.