ಉಡುಪಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 49733 ಹೆಸರು ಡಿಲೀಟ್

ಜಿಲ್ಲೆಯ ವ್ಯಾಪ್ತಿಗೆ ಬರುವ ಐದು ವಿಧಾನಸಭಾ ಕ್ಷೇತ್ರಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 4,91,109 ಪುರುಷರು, 5,23,023 ಮಹಿಳೆಯರು ಹಾಗೂ 11 ತೃತೀಯ ಲಿಂಗಿಗಳು ಸೇರಿ ಒಟ್ಟು 10,14,143 ಮತದಾರರು ನೋಂದಾಯಿಸಲ್ಪಟ್ಟಿದ್ದಾರೆ.
sir udupi dc
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿದರು.
Published on: 

ಉಡುಪಿ: ಜಿಲ್ಲೆಯ ವ್ಯಾಪ್ತಿಗೆ ಬರುವ ಐದು ವಿಧಾನಸಭಾ ಕ್ಷೇತ್ರಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 4,91,109 ಪುರುಷರು, 5,23,023 ಮಹಿಳೆಯರು ಹಾಗೂ 11 ತೃತೀಯ ಲಿಂಗಿಗಳು ಸೇರಿ ಒಟ್ಟು 10,14,143 ಮತದಾರರು ನೋಂದಾಯಿಸಲ್ಪಟ್ಟಿದ್ದಾರೆ. ಎಸ್​ಐಆರ್​ ಪೂರ್ವದಲ್ಲಿ 1063876 ಮತದಾರರಿದ್ದು, 29396 ಮಂದಿ ಮೃತರು ಸೇರಿ ಒಟ್ಟು 49,733 ಮಂದಿ ಹೆಸರನ್ನು ಅಳಿಸಿಹಾಕಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಬೈಂದೂರು ಕ್ಷೇತ್ರದಲ್ಲಿ 230309 ಮತದಾರರಿದ್ದು, 11554 ಮಂದಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಕುಂದಾಪುರದಲ್ಲಿ 203103 ಮತದಾರರಿದ್ದು, 9370 ಮಂದಿ ಹೆಸರು ತೆಗೆಯಲಾಗಿದೆ. ಉಡುಪಿಯಲ್ಲಿ 2.07,598 ಮತದಾರರಿದ್ದು, 14082 ಮಂದಿ ಹೆಸರು ಅಳಿಸಲಾಗಿದೆ. ಕಾಪುವಿನಲ್ಲಿ 187952 ಮಂದಿ ಮತದಾರರಿದ್ದು, 6766 ಮಂದಿ ಹೊರಗುಳಿದಿದ್ದಾರೆ. ಕಾರ್ಕಳದಲ್ಲಿ 185181 ಮತದಾರರಿದ್ದು, ಕಳೆದ ಬಾರಿಗಿಂತ 7961 ಮತದಾರರು ಕಡಿಮೆಯಾಗಿದ್ದಾರೆ. ಉಡುಪಿಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಮತದಾರರ ಸಂಖ್ಯೆ ಇಳಿಕೆಯಾಗಿದ್ದು, ಶೇ.4.67 ಮಂದಿ ಹೆಸರು ಮಾತ್ರ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಕರಡು ಪಟ್ಟಿಯ ಪ್ರಕಟಣೆಯ ನಂತರ ಜಿಲ್ಲೆಯಲ್ಲಿ ಹೊಸದಾಗಿ 17,334 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಬೈಂದೂರು ಕ್ಷೇತ್ರದಲ್ಲಿ 3,438 ಮತದಾರರು, ಕುಂದಾಪುರ ಕ್ಷೇತ್ರದಲ್ಲಿ 2,874 ಮತದಾರರು, ಉಡುಪಿ ಕ್ಷೇತ್ರದಲ್ಲಿ 4,569 ಮತದಾರರು, ಕಾಪು ಕ್ಷೇತ್ರದಲ್ಲಿ 4,084 ಮತದಾರರು ಮತ್ತು ಕಾರ್ಕಳ ಕ್ಷೇತ್ರದಲ್ಲಿ 2,369 ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದರು.

47 ವಿದೇಶಿ ಮತದಾರರು ಪತ್ತೆ

ಬ್ರಹ್ಮಾವರ ತಾಲೂಕಿನಲ್ಲಿ ಇಬ್ಬರು ನೇಪಾಳಿ ಪ್ರಜೆಗಳು, ಉಡುಪಿಯಲ್ಲಿ 18 ನೇಪಾಳಿ, 3 ಯುಕೆ, 3 ಯುಎಸ್​, 1 ಕೆನಡಾ, 1 ಫ್ರಾನ್ಸ್ ​ ಪ್ರಜೆಗಳು, ಕಾಪುವಿನಲ್ಲಿ 17 ನೇಪಾಳಿ ಪ್ರಜೆಗಳು, ಕಾರ್ಕಳದಲ್ಲಿ 1 ಅಮೇರಿಕಾ, 1 ಅಸ್ಟ್ರೆಲಿಯಾ ಪ್ರಜೆಗಳು ಸೇರಿ ಒಟ್ಟು 47 ಮಂದಿ‌ ವಿದೇಶಿ ಪ್ರಜೆಗಳ ಹೆಸರು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದೆ. 21 ಮಂದಿ ಯಾವುದೇ ಅರ್ಜಿಯನ್ನು ಸ್ವೀಕರಿಸದೆ ಎಸ್​ಐಆರ್​ ಪ್ರಕ್ರಿಯೆಯನ್ನೇ ತಿರಸ್ಕರಿಸಿದ್ದಾರೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net