ಸಂಘದ ಅಧ್ಯಕ್ಷ ಸೋಮನಾಥ ಶಾಂತಿ ಅಧ್ಯಕ್ಷತೆ ವಹಿಸಿದ್ದರು. ರಶ್ಮಿತಾ ರಾಜೇಶ್ ಕೋಟ್ಯಾನ್ ದತ್ತಿನಿಧಿಗೆ ಚಾಲನೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಧನಂಜಯ್ ಕುಲಾಲ್, ಶಿರ್ತಾಡಿ ಗ್ರಾಪಂ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಹಿರಿಯರಾದ ಪಿ.ಕೆ.ರಾಜು ಪೂಜಾರಿ, ಹೇಮಾ ಕೆ., ಅಭಿವೃದ್ಧಿ ಸಮಿತಿ ಸಂಚಾಲಕ ಪದ್ಮನಾಭ ಕೋಟ್ಯಾನ್, ಹರಿಶ್ಚಂದ್ರ ಕೆ.ಸಿ.ಪೂಜಾರಿ, ಮಹಿಳಾ ಸಂಘದ ಅಧ್ಯಕ್ಷೆ ಸುಗಂಧಿ, ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್, ಮಾಜಿ ಅಧ್ಯಕ್ಷ ಲಕ್ಷ್ಮಣ ವಿ.ಕೋಟ್ಯಾನ್, ಪ್ರಮುಖರಾದ ಲಕ್ಷ್ಮಣ ಸುವರ್ಣ, ಅಪ್ಪು ಪೂಜಾರಿ, ಕೃಷ್ಣಪ್ಪ ಪೂಜಾರಿ, ಲಿಂಗಪ್ಪ ಸಾಲ್ಯಾನ್, ರಾಜೇಶ್ ಕೊಣಾಜೆ, ಸುರೇಂದ್ರ ಕಂದೀರು, ವಿಠ್ಠಲ ಪೂಜಾರಿ ಉಪಸ್ಥಿತರಿದ್ದರು.