ಊರಿನ ಅಭಿವೃದ್ಧಿಗೆ ಒಗ್ಗಟ್ಟು

ಕೆಮ್ಮಾರ ಯುನೈಟೆಡ್ ಎಫ್.ಸಿ. ಕ್ರಿಕೆಟ್ ಪಂದ್ಯಾವಳಿ ಸಭಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಫಝಲ್ ಕಡಬ, ಅಝೀಜ್ ಬಿ.ಕೆ., ಸಜ್ಜದ್ ಆತೂರು, ದೇವಿಪ್ರಸಾದ್ ನೀರಾಜೆ, ರಾಮಣ್ಣ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.
ಕೆಮ್ಮಾರ ಯುನೈಟೆಡ್ ಎಫ್.ಸಿ. ಕ್ರಿಕೆಟ್ ಪಂದ್ಯಾವಳಿ ಸಭಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಫಝಲ್ ಕಡಬ, ಅಝೀಜ್ ಬಿ.ಕೆ., ಸಜ್ಜದ್ ಆತೂರು, ದೇವಿಪ್ರಸಾದ್ ನೀರಾಜೆ, ರಾಮಣ್ಣ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.
Published on
ಕಡಬ: ಊರಿನ ಜನರನ್ನು ಸಂಘಟಿಸುವ ಮತ್ತು ಸಂಪನ್ಮೂಲ ಕ್ರೋಡೀಕರಿಸುವ ವಿಶೇಷ ಶಕ್ತಿ ಯುವ ಸಮೂಹಕ್ಕಿದೆ. ಊರಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ಪಡೆಯುವಲ್ಲಿಯೂ ನೇತೃತ್ವ ವಹಿಸಬೇಕು. ಆ ಮೂಲಕ ಊರಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ ಹೇಳಿದರು.
ಕೆಮ್ಮಾರದಲ್ಲಿ ಯುನೈಟೆಡ್ ಎಫ್.ಸಿ. ವತಿಯಿಂದ 2 ದಿನ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ವಕೀಲ ಖಲಂದರ್ ಕೊಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಪ್ರತಿಭಾವಂತ ಪ್ರತಿಭೆಗಳಿವೆ, ಅವರನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಕೆಲಸ ಯುವ ಸಂಘಟನೆಗಳಿಂದ ಆಗಬೇಕಾಗಿದೆ ಎಂದರು.
ಕೆಮ್ಮಾರದಂಥ ಗ್ರಾಮೀಣ ಪ್ರದೇಶದಿಂದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆಯಿಷಾ ಫಿಝ, ಫಾತಿಮತ್ ಶ್ರೀಯ, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮಹಮ್ಮದ್ ಶೆಮಿ, 14 ವರ್ಷದೊಳಗಿನ ವಿದ್ಯಾರ್ಥಿಗಳ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುವ ನಿಶಾದ್ ಸುಲೈಮಾನ್ ಅವರನ್ನು ಸನ್ಮಾನಿಸಿಸಲಾಯಿತು.
ಕಡಬ ಪಪಂ ಸದಸ್ಯ ಫಝಲ್ ಕಡಬ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಜ್ ಬಿ.ಕೆ., ಪ್ರಮುಖರಾದ ಸಜ್ಜದ್ ಆತೂರು, ದೇವಿಪ್ರಸಾದ್ ನೀರಾಜೆ, ರಾಮಣ್ಣ ಕೆಮ್ಮಾರ, ನವಾಝ್ ಪುತ್ತೂರು, ಝಕರಿಯಾ ತೋಟ, ಯುನೈಟೆಡ್ ಎಫ್.ಸಿ. ಸಂಘಟನೆ ಪದಾಧಿಕಾರಿಗಳಾದ ರಿಯಾಝ್, ಶರೀಫ್ ಮಜಲು, ಜಮಾಲುದ್ದೀನ್ ಎಸ್.ಪಿ., ಲತೀಫ್, ಮನ್ಸೂರ್, ಜಲೀಲ್ ಕೆಮ್ಮಾರ, ಶೌಕತ್ ಕೆಮ್ಮಾರ, ನಝೀರ್, ಸಂಶುದ್ದೀನ್ ಉಪಸ್ಥಿತರಿದ್ದರು. ಜುನೈದ್ ಕೆಮ್ಮಾರ ಸ್ವಾಗತಿಸಿದರು. ಮುಸ್ತಫಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net